ಉಗ್ರರು ಪರಾರಿಯಾಗುತ್ತಿದ್ದಾರೆ : ಜೇಟ್ಲಿ – News Mirchi

ಉಗ್ರರು ಪರಾರಿಯಾಗುತ್ತಿದ್ದಾರೆ : ಜೇಟ್ಲಿ

ಕಾಶ್ಮೀರ ಕಣಿವೆಯಲ್ಲಿ ಜಮ್ಮೂ ಕಾಶ್ಮೀರ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳಿಗೆ ಕಂಗೆಟ್ಟಿರುವ ಉಗ್ರರು ಪಲಾಯನದ ಹಾದಿ ಹಿಡಿದಿದ್ದಾರೆ ಎಂದು ರಕ್ಷಣಾ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಕಣಿವೆಯಿಂದ ಸಶಸ್ತ್ರ ಉಗ್ರರನ್ನು ಓಡಿಸುವುದೇ ಸರ್ಕಾರದ ಉದ್ದೇಶವೆಂದು ಅವರು ಒತ್ತಿ ಹೇಳಿದರು.

ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಜೇಟ್ಲಿ, ನೋಟು ರದ್ದು ಕ್ರಮದಿಂದ ಉಗ್ರರಿಗೆ ಆರ್ಥಿಕ ಸಮಸ್ಯೆ ಹೆಚ್ಚಾಗಿದ್ದು, ಅಕ್ರಮವಾಗಿ ವಿದೇಶೀ ನಿಧಿಗಳು, ಜಮ್ಮೂ ಕಾಶ್ಮೀರದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಬಗ್ಗೆ ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ(ಎನ್.ಐ.ಎ) ವಿಶೇಷ ಗಮನ ಹರಿಸಿರುವುದು ಉಗ್ರರನ್ನು ಸಂಕಷ್ಟಕ್ಕೆ ದೂಡಿದೆ ಎಂದರು.

ಇದರ ಜೊತೆಗೆ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳಿಂದಾಗಿ ಉಗ್ರರು ದಾಳಿ ನಡೆಸಲು ಧೈರ್ಯ ಮಾಡುತ್ತಿಲ್ಲ. ಕಣಿವೆಯಲ್ಲಿ ಆತಂಕ ಸೃಷ್ಟಿಸುವ ಪ್ರಯತ್ನಗಳನ್ನೂ ಉಗ್ರರು ಕೈಬಿಡುತ್ತಿದ್ದಾರೆ. ಕೆಲ ತಿಂಗಳುಗಳಿಂದ ಅವರ ಸಂಖ್ಯೆಯೂ ಕಡಿಮೆಯಾಗುತ್ತಿದೆ ಎಂದು ಜೇಟ್ಲಿ ಹೇಳಿದರು.

Loading...