ಕೊಹ್ಲಿ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡಿದ ಕೆ.ಆರ್.ಕೆ |News Mirchi

ಕೊಹ್ಲಿ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡಿದ ಕೆ.ಆರ್.ಕೆ

ಮುಂಬೈ: ಸದಾ ವಿವಾದಗಳಿಂದಲೇ ಸುದ್ದಿಯಲ್ಲಿ ನಿಲ್ಲುವ ಬಾಲಿವುಡ್ ನಟ, ವಿಮರ್ಶಕ ಕಮಾಲ್ ರಷೀದ್ ಖಾನ್ (ಕೆ.ಆರ್.ಕೆ) ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಈ ಬಾರಿ ಆತ ವಿಷ ಕಾರಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಹೀನಾಯ ಸೋಲುಂಡ ಬಳಿಕ, ಕೆ.ಆರ್.ಕೆ ಕೊಹ್ಲಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಕೊಹ್ಲಿಯನ್ನು ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ಬಹಿಷ್ಕರಿಸಬೇಕು ಎಂದು ಒತ್ತಾಯಿಸಿರುವ ಖಾನ್, ಕೊಹ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಕೊಹ್ಲಿಯನ್ನು ಜೈಲಿಗೆ ಕಳುಹಿಸಬೇಕು, ಭಾರತ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳೆಲ್ಲಾ ಸೇರಿ ಆತನನ್ನು ಹೊರಗಟ್ಟಬೇಕು ಎಂದು ಹೇಳಿದ ಖಾನ್, ನಾಯಕತ್ವದಿಂದ ಕೊಹ್ಲಿಯನ್ನು ಕೆಳಗಿಳಿಸಿ ಎಂದು ಬಿಸಿಸಿಐ ಗೆ ಸೂಚಿಸಿದ್ದಾರೆ.

“ಸಹೋದರಾ ಕೊಹ್ಲಿ… ನೀನು ನೀಡಿದ ಕ್ಯಾಚ್ ಅನ್ನು ಪಾಕಿಸ್ತಾನ ಫೀಲ್ಡರ್ ಕೈಚೆಲ್ಲಿದರು. ಆದರೆ ನಂತರದ ಎಸೆತಕ್ಕೇ ನೀನು ಸುಲಭ ಕ್ಯಾಚ್ ನೀಡಿ ಔಟ್ ಆದೆ. ಇದರಿಂದ ನೀನು ಫಿಕ್ಸಿಂಗ್ ಮಾಡಿಕೊಂಡಿದ್ದೀಯ ಎಂದು ಸ್ಪಷ್ಟವಾಗಿ ಗೊತ್ತಾಗುತ್ತದೆ. 130 ಕೋಟಿ ಭಾರತೀಯರ ಪ್ರತಿಷ್ಠೆಯನ್ನು ಪಾಕಿಸ್ತಾನಕ್ಕೆ ಮಾರಿದ ವಿರಾಟ್ ಕೊಹ್ಲಿ ವಿರುದ್ಧ ಆಜೀವ ನಿಷೇಧ ಹೇರಬೇಕು. ಕೊಹ್ಲಿಯೊಂದಿಗೆ ಯುವರಾಜ್ ಸಿಂಗ್, ಎಂ.ಎಸ್.ಧೋನಿ ಸಹಾ ಫಿಕ್ಸಿಂಗ್ ನಲ್ಲಿ ತೊಡಗಿದ್ದಾರೆ. ನೀವೆಲ್ಲರೂ ಫಿಕ್ಸರ್ ಗಳು, ಪ್ರಜೆಗಳನ್ನು ಮೋಸ ಮಾಡುವುದು ನಿಲ್ಲಿಸಿ ಎಂದು ಕಮಾಲ್ ಆರ್ ಖಾನ್ ಟ್ವೀಟ್ ಮಾಡಿದ್ದಾರೆ.

ಬಾಯಿಗೆ ಬಂದಂತೆ ಆರೋಪ ಮಾಡಿರುವ ಕೆ.ಆರ್.ಕೆ ವಿರುದ್ಧ ಟೀಮ್ ಇಂಡಿಯಾ, ಪಾಕಿಸ್ತಾನ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಟವನ್ನು ಆಟವನ್ನಾಗಿ ಮಾತ್ರ ನೋಡಿ. ಅನಗತ್ಯ ಆರೋಪ ಮಾಡಬೇಡಿ ಎಂದು ಬುದ್ದಿವಾದ ಹೇಳಿದ್ದಾರೆ. ಟೀಮ್ ಇಂಡಿಯಾ ಎಂತೆಂಥ ಅಗ್ರ ತಂಡಗಳನ್ನು ಸೋಲಿಸಿ ಫೈನಲ್ ತಲುಪಿದ ವಿಷಯವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಕೊಹ್ಲಿ ಈಗಲೂ ನಂಬರ್ ಒನ್ ಬ್ಯಾಟ್ಸ್ ಮ್ಯಾನ್ ಎಂದು ಹೇಳಿದ್ದಾರೆ.

Loading...
loading...
error: Content is protected !!