8 ಎಲ್ಇಟಿ ಉಗ್ರರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಜೈಪುರ ಕೋರ್ಟ್ – News Mirchi

8 ಎಲ್ಇಟಿ ಉಗ್ರರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಜೈಪುರ ಕೋರ್ಟ್

ಮೂವರು ಪಾಕಿಸ್ತಾನೀಯರು ಸೇರಿದಂತೆ ಒಟ್ಟು 8 ಜನ ಪಾಕ್ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಇ-ತೊಯ್ಬಾ(ಎಲ್ಇಟಿ) ಉಗ್ರರಿಗೆ ಜೈಪುರದ ಸ್ಥಳೀಯ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿದೆ. ಈ 8 ಜನರನ್ನು 2010 ಮತ್ತು 2011 ರಲ್ಲಿ ರಾಜಸ್ಥಾನ ಉಗ್ರ ನಿಗ್ರಹ ಪಡೆ ಬಂಧಿಸಿತ್ತು. ಬುಧವಾರ ಜೈಪುರದಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ರವಿ ಬೆಳಗೆರೆ, ಅನಿಲ್ ರಾಜ್ ಅವರಿಗೆ ವಿಧಿಸಿದ್ದ ಶಿಕ್ಷೆಗೆ ಹೈಕೋರ್ಟ್ ತಡೆ

ಕಾನೂನು ಬಾಹಿರ ಚಟುವಟಿಕೆಗಳಿಗೆ ಸಂಚು, ಉಗ್ರ ಸಂಘಟನೆಯಲ್ಲಿ ಗುರುತಿಸಿಕೊಂಡಿರುವುದು ಸೇರಿದಂತೆ ವಿವಿಧ ಕಾಯ್ದೆಗಳಡಿಯಲ್ಲಿ ಆರೋಪಿಗಳನ್ನು ಅಪರಾಧಿಗಳು ಎಂದು ನಿರ್ಧರಿಸಿ ಜೀವಾವಧಿ ಶಿಕ್ಷೆ ವಿಧಿಸಿರುವ ನ್ಯಾಯಾಲಯ, ತಲಾ 3 ಲಕ್ಷ ದಂಡ ವಿಧಿಸಿದೆ.

ಮಂದಿರ ಕೆಡವಿದ ಬಾಬರ್, ಲೂಟಿಗೈದ ಖಿಲ್ಜಿ ಪರ ರಾಹುಲ್ ಗಾಂಧಿ

ಆರೋಪಿಗಳಲ್ಲಿ ಪಾಕ್ ಮೂಲದ ವ್ಯಕ್ತಿಗಳಾದ ಅಸ್ಗರ್ ಅಲಿ, ಶಖ್ಖರ್ ಉಲ್ಲಾ ಮತ್ತು ಶಾಹಿದ್ ಇಕ್ಬಾಲ್ ಅವರ ಮೇಲೆ ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸಲು ವ್ಯಕ್ತಿಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದ ಆರೋಪಗಳನ್ನು ಹೊತ್ತಿದ್ದರು. ಉಳಿದು ಐವರು ಬಾಬು ಅಲಿಯಾಸ್ ನಿಶಾಚಂದ್ ಅಲಿ, ಹಫೀಜ್ ಅಬ್ದುಲ್, ಪವನ್ ಪುರಿ, ಅರುಣ್ ಜೈನ್ ಮತ್ತು ಕಬಿಲ್ ಜಿಂದಾಲ್.

ವಿವಿಧ ಜೈಲುಗಳಲ್ಲಿರುವ ಎಲ್ಇಟಿ ಸದಸ್ಯರ ನಡುವಿನ ಮತ್ತು ಪಾಕ್ ಜೈಲಿನಲ್ಲಿದ್ದ ಎಲ್ಇಟಿ ಕಮಾಂಡರ್ ಜೊತೆ ನಡೆದ ದೂರವಾಣಿ ಸಂಭಾಷಣೆಯ ಕುರಿತು ಕೇಂದ್ರ ಗುಪ್ತಚರ ಸಂಸ್ಥೆಯಿಂದ ಮಾಹಿತಿ ಪಡೆದ ರಾಜಸ್ಥಾನ ಉಗ್ರ ನಿಗ್ರಹ ಪಡೆ, ಕಾರ್ಯಚರಣೆ ನಡೆಸಿ ಬಂಧಿಸಿತ್ತು.

Get Latest updates on WhatsApp. Send ‘Subscribe’ to 8550851559

Loading...