ಹಿಂಸೆಗೆ ತಿರುಗಿದ ಜಲ್ಲಿಕಟ್ಟು ಪ್ರತಿಭಟನೆ : ಪೊಲೀಸ್ ಠಾಣೆ, ವಾಹನಗಳಿಗೆ ಬೆಂಕಿ

ತಮಿಳುನಾಡಿನಲ್ಲಿ ಪರ ತೀವ್ರಗೊಂಡಿದ್ದು, ಮರೀನಾ ಬೀಚ್ ಸಮೀಪವಿರುವ ಐಸ್ ಹೌಸ್ ಪೊಲೀಸ್ ಠಾಣೆಗೆ ಆಕ್ರೋಷಿತ ಪ್ರತಿಭಟನಾಕಾರರು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಪ್ರಯತ್ನಿಸಿದ ವೇಳೆ ಹಿಂಸಾತ್ಮಕವಾಗಿ ಬದಲಾಯಿತು. ಮೂಲಗಳ ಪ್ರಕಾರ ಪೊಲೀಸ್ ಠಾಣೆಯ ಪ್ರದೇಶ ಪ್ರತಿಭಟನಾಕಾರರಿಂದ ಧ್ವಂಸಗೊಂಡಿದ್ದು, 20 ಜನ ಪೊಲೀಸರು ಈ ವೇಳೆ ಗಾಯಗೊಂಡಿದ್ದಾರೆ.

ಐಸ್ ಹೌಸ್ ಪೊಲೀಸ್ ಠಾಣೆ ಹೊರಗೆ ನಿಲ್ಲಿಸಲಾಗಿದ್ದ ವಾಹನಗಳಿಗೂ ಪ್ರತಿಭಟನಾಕಾರರು ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರ ಮೇಲೆ ಕಲ್ಲೆಸೆತಕ್ಕೆ ಮುಂದಾದ ಪ್ರತಿಭಟನಾಕಾರರು, ಸಿಬ್ಬಂದಿ ಮೇಲೆ ಬಾಂಬ್ ಎಸೆದಿದ್ದಾರೆ. ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.

ಕ್ರೀಡೆಗೆ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ಮರೀನಾ ಬೀಚ್ ಬಳಿ ಒಂದು ವಾರದಿಂದ ನಡೆಯಿತ್ತಿದ್ದ ಪ್ರತಿಭಟನಾ ಸ್ಥಳದಲ್ಲಿ ಇಂದು ಮುಂಜಾನೆ ಭಾರೀ ಪ್ರಮಾಣದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಪ್ರತಿಭಟನಾಕಾರರನ್ನು ತೆರವುಗೊಳಿಸುವ ಸಂದರ್ಭದಲ್ಲಿ ಪ್ರತಿಭಟನಾಕಾರರು ಹಿಂಸೆಗೆ ಇಳಿದರು.

Related News

loading...
Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache