ಪ್ರತ್ಯೇಕತಾವಾದಿಗಳ ಪ್ರತಿಭಟನೆ ವೇಳೆ ಬಾಂಬ್ ಸ್ಪೋಟಕ್ಕೆ ನಾಲ್ವರು ಪೊಲೀಸರು ಬಲಿ

ಜಮ್ಮೂ ಕಾಶ್ಮೀರ:ಪ್ರಬಲ ಸುಧಾರಿತ ಬಾಂಬ್ ಸ್ಪೋಟಗೊಂಡ ಪರಿಣಾಮ ನಾಲ್ವರು ಪೊಲೀಸರು ಸಾವನ್ನಪ್ಪಿದ ಘಟನೆ ಶನಿವಾರ ಜಮ್ಮೂ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೊಪೋರ್ ನಲ್ಲಿ ನಡೆದಿದೆ. ಪ್ರತ್ಯೇಕತಾವಾದಿಗಳು ಬಂದ್ ನಡೆಸುತ್ತಿದ್ದ ಗೋಲ್ ಮಾರ್ಕೆಟ್ ಬಳಿ ಈ ಸ್ಪೋಟ ನಡೆದಿದ್ದು, ಉಗ್ರರು ಈ ಸ್ಪೋಟಕ್ಕೆ ಕಾರಣ ಎಂದು ಶಂಕಿಸಲಾಗಿದೆ.

ಸರ್ಕಾರ ಘೋಷಿಸಿದ್ದು 10 ಲಕ್ಷ, ಜನ ಒಂದೇ ದಿನದಲ್ಲಿ ಕೊಟ್ಟರು 17 ಲಕ್ಷ ರೂಪಾಯಿ

ಘಟನೆ ನಡೆದ ಸಂದರ್ಭದಲ್ಲಿ ಪ್ರತ್ಯೇಕತಾವಾದಿಗಳು ನಡೆಸುತ್ತಿದ್ದ ಪ್ರತಿಭಟನೆಯಿಂದಾಗಿ ಶಾಂತಿ ಭದ್ರತೆಗೆ ಧಕ್ಕೆಯಾಗದಂತೆ ಭಾರೀ ಪೊಲೀಸ್ ಬಂದೋ ಬಸ್ತ್ ಮಾಡಲಾಗಿತ್ತು. ಹೆಚ್ಚು ಭದ್ರತಾ ಸಿಬ್ಬಂದಿ ನಿಯೋಜನೆಗೊಂಡಿದ್ದ ಮಾರುಕಟ್ಟೆಯೊಳಗೆ ಬಾಂಬ್ ಸ್ಪೋಟ ಸಂಭವಿಸಿದೆ.

ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಜಮ್ಮೂ ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಸಾವನ್ನಪ್ಪಿದ ಪೊಲೀಸ್ ಕುಟುಂಬಗಳಿಗೆ ಸಾಂತ್ವನ ಹೇಳಿ ಟ್ವೀಟ್ ಮಾಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಘಟನೆ ಕುರಿತು ಪ್ರತಿಕ್ರಿಯಿಸಿದ್ದು, ಹುತಾತ್ಮ ನಾಲ್ವರು ಕೆಚ್ಚೆದೆಯ ಪೊಲೀಸರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಟ್ವೀಟ್ ಮಾಡಿದ್ದಾರೆ. 1993 ರಲ್ಲಿ ನಡೆದ 50ಕ್ಕೂ ಹೆಚ್ಚು ನಾಗರಿಕ ಹತ್ಯೆಗೆ ಸೊಪೋರ್ ನಲ್ಲಿ ಇಂದು ಪ್ರತ್ಯೇಕತಾವಾದಿಗಳು ಬಂದ್ ಆಚರಿಸಿ ಪ್ರತಿಭಟನೆ ನಡೆಸಿದ್ದರು.

English Sumamry:Four policemen killed in a Improvised Explosive Device (IED) blast in Sopore, Jammu Kashmir today. The Blast took place near Goal Market where separatists were were observing protest.

Get Latest updates on WhatsApp. Send ‘Subscribe’ to 8550851559