ಬಾರಾಮುಲ್ಲಾ: ಎನ್ಕೌಂಟರಿನಲ್ಲಿ ಇಬ್ಬರು ಉಗ್ರರ ಹತ್ಯೆ – News Mirchi

ಬಾರಾಮುಲ್ಲಾ: ಎನ್ಕೌಂಟರಿನಲ್ಲಿ ಇಬ್ಬರು ಉಗ್ರರ ಹತ್ಯೆ

ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಸೋಮವಾರ ನಡೆದ ಎನ್ಕೌಂಟರಿನಲ್ಲಿ ಬಾರಾಮುಲ್ಲಾ ಜಿಲ್ಲೆಯ ಸೋಪೋರ್ ನಲ್ಲಿ ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು ಹತ್ಯೆ ಮಾಡಿವೆ.

ಪೊಲೀಸರು, ಸೇನೆ ಮತ್ತು ಕೆಂದ್ರ ರಸರ್ವ್ ಪೊಲೀಸ್ ಸಿಬ್ಬಂದಿ ಸೊಪೋರ್ ನಲ್ಲಿ ಉಗ್ರರ ಉಪಸ್ಥಿತಿಯ ಖಚಿತ ಮಾಹಿತಿ ಪಡೆದು ಶೋಧ ಕಾರ್ಯಚರಣೆ ನಡೆಸಿದ್ದರು. ಈ ವೇಳೆ ಉಗ್ರರು ಭದ್ರತಾಪಡೆಗಳ ಕಡೆ ಗುಂಡು ಹಾರಿಸಲು ಆರಂಭಿಸಿದಾಗ, ಭದ್ರತಾ ಪಡೆಗಳೂ ಪ್ರತಿದಾಳಿ ನಡೆಸಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿವೆ. ಸತ್ತ ಉಗ್ರರ ಗುರುತು ಇನ್ನೂ ಪತ್ತೆಯಾಗಬೇಕಿದ್ದು, ಕಾರ್ಯಚರಣೆ ಮುಂದುವರೆದಿದೆ.

Loading...