ರಾಜಕೀಯಕ್ಕೆ ಜನಾರ್ಧನ ರೆಡ್ಡಿ ಗುಡ್ ಬೈ?

ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ರಾಜಕೀಯ ನಿವೃತ್ತಿ ಪಡೆಯಲಿದ್ದಾರಾ? ರೆಡ್ಡಿ ಅವರ ಆಪ್ತ ಮೂಲಗಳ ಪ್ರಕಾರ ಶೀಘ್ರದಲ್ಲಿ ಜನಾರ್ಧನರೆಡ್ಡಿ ಚುನಾವಣೆಗಳಲ್ಲಿ ಸ್ಪರ್ಧಿಸದೇ ಇರಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ ಸಕ್ರಿಯ ರಾಜಕಾರಣದಿಂದ ದೂರ ಸರಿಯುವುದಿಲ್ಲ. ಚುನಾವಣೆಗೆ ಸ್ಪರ್ಧಿಸದೇ ತೆರೆ ಹಿಂದೆ ರಾಜಕಾರಣ ಮುಂದುವರೆಯಲಿದೆ ಎನ್ನಲಾಗುತ್ತಿದೆ.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನು ಒಂದು ವರ್ಷವಿರುವಾಗಲೇ ರೆಡ್ಡಿ ತಮ್ಮ ಆಪ್ತರ ಬಳಿ ತಮ್ಮ ತೀರ್ಮಾನದ ಕುರಿತು ಹೇಳಿದ್ದಾರೆ ಎನ್ನಲಾಗುತ್ತಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ ಅಥವಾ ಸಿಂಧನೂರಿನಿಂದ ಬಿಜೆಪಿಯಿಂದ ಅವರು ಸ್ಪರ್ಧಿಸುತ್ತಾರೆ ಎಂದು ಭಾವಿಸಲಾಗಿತ್ತು.

ಜನಾರ್ಧನ ರೆಡ್ಡಿ ವಿರುದ್ಧ ಹಲವು ಕೇಸುಗಳಿದ್ದು, ಇತ್ತೀಚೆಗೆ ನಡೆದ ತಮ್ಮ ಪುತ್ರಿಯ ಅದ್ಧೂರಿ ವಿವಾಹದ ವಿಷಯದಲ್ಲೂ ಹಲವು ಆರೋಪಗಳು ಕೇಳಿ ಬಂದಿದ್ದವು. ರಾಜಕೀಯದಲ್ಲಿ ಸಚಿವ ಸ್ಥಾನವನ್ನೂ ಅನುಭವಿಸಿದ್ದೇನೆ, ಇನ್ನು ಹೊಸದಾಗಿ ಸಾಧಿಸುವುದೇನೂ ಇಲ್ಲ ಎಂದು ಆಪ್ತರ ಬಳಿ ಹೇಳಿದ್ದಾಗಿ ತಿಳಿದು ಬಂದಿದೆ.

Loading...
error: Content is protected !!