ಕುರ್ತಾ ಪೈಜಾಮಾದಲ್ಲಿ ಮಿಂಚಿದ ಜಪಾನ್ ಪ್ರಧಾನಿ – News Mirchi

ಕುರ್ತಾ ಪೈಜಾಮಾದಲ್ಲಿ ಮಿಂಚಿದ ಜಪಾನ್ ಪ್ರಧಾನಿ

ಜಪಾನಿನ ಪ್ರಧಾನಿ ಶಿಂಜೋ ಅಬೆ ಅವರು ಎರಡು ದಿನಗಳ ಭೇಟಿಗಾಗಿ ಇಂದು ಭಾರತಕ್ಕೆ ಆಗಮಿಸಿದ್ದಾರೆ. ಗುಜರಾತಿನ ಅಹ್ಮದಾಬಾದ್ ಗೆ ಆಗಮಿಸಿದ ಶಿಂಜೋ ಅಬೆ ಅವರನ್ನು ಪ್ರಧಾನಿ ಮೋದಿ ಸ್ವಾಗತಿಸಿದರು. ನಂತರ ಇಬ್ಬರು ನಾಯಕರು ವಿಮಾನ ನಿಲ್ದಾಣದಿಂದ ರೋಡ್ ಶೋ ನಡೆಸಿದರು.

ಈ ರೋಡ್ ಶೋನಲ್ಲಿ ಶಿಂಜೋ ಅಬೆ ಪ್ರಧಾನಿ ಮೋದಿಯವರಂತೆ ಕುರ್ತಾ ಪೈಜಾಮಾ ಧರಿಸಿದ್ದು ವಿಶೇಷ ಆಕರ್ಷಣೆಯಾಗಿತ್ತು. ಮತ್ತೊಂದೆಡೆ, ವಿಮಾನ ನಿಲ್ದಾಣದಲ್ಲಿನ ಪಾಶ್ಚಾತ್ಯ ಉಡುಪಿನಲ್ಲಿ ಕಾಣಿಸಿಕೊಂಡ ಶಿಂಜೋ ಅಬೆ ಅವರ ಪತ್ನಿ ಅಕೀ ಅಬೆ ರೋಡ್ ಶೋ ನಲ್ಲಿ ಭಾರತೀಯ ಧಿರಿಸು ಚೂಡಿದಾರ್ ನಲ್ಲಿ ಮಿಂಚಿದರು. ಸುಮಾರು 8 ಕಿ.ಮೀ ಈ ರೋಡ್ ಶೋ ನಡೆಯಿತು.

ಶಿಂಜೋ ದಂಪತಿಗಳನ್ನು ಸ್ವಾಗತಿಸಲು ರಸ್ತೆಯಿಂದ ಸ್ವಲ್ಪ ದೂರದಲ್ಲಿ ಹಲವಾರು ಸಾಂಸ್ಕೃತಿಕ ಪ್ರದರ್ಶನಗಳನ್ನು ಆಯೋಜಿಸಲಾಗಿತ್ತು. ಅನೇಕ ಕಲಾವಿದರು ಸಬರಮತಿ ನದಿ ತೀರದಲ್ಲಿ ನಿರ್ಮಿಸಿದ್ದ ವೇದಿಕೆಯ ಮೇಲೆ ನೃತ್ಯ ಮಾಡಿದರು.

ಗುರುವಾರ ಭಾರತದ ಮೊದಲ ಬುಲೆಟ್ ರೈಲು (ಮುಂಬೈ ಮತ್ತು ಅಹಮದಾಬಾದ್ ನಡುವೆ) ಶಂಕುಸ್ಥಾಪನೆ ಸಮಾರಂಭದ ನಡೆಯಲಿದೆ. ಅಂದು ಸಂಜೆ ಗುಜರಾತಿ ತಿನಿಸುಗಳೊಂದಿಗೆ ಶಿಂಜೋ ಅಬೆ ಅವರಿಗೆ ವಿಶೇಷ ಭೋಜನಕೂಟವನ್ನು ಆಯೋಜಿಸಲಾಗಿದೆ.

[ಇದನ್ನೂ ಓದಿ: ಜಪಾನ್ ಪ್ರಧಾನಿ ಭೇಟಿ ಬೆನ್ನಲ್ಲೇ, ಭಾರತದಲ್ಲಿ ಹೈಸ್ಪೀಡ್ ರೈಲು ಯೋಜನೆಗೆ ಚೀನಾ ಆಸಕ್ತಿ]

Get Latest updates on WhatsApp. Send ‘Add Me’ to 8550851559

Click for More Interesting News

Loading...
error: Content is protected !!