ಹಿಮಪಾತಕ್ಕೆ ಸಿಲುಕಿ ಹುತಾತ್ಮನಾದ ಹಾಸನದ ಯೋಧ

ಜಮ್ಮೂ ಕಾಶ್ಮೀರದಲ್ಲಿ ಕರ್ತವ್ಯ ನಿರತರಾಗಿದ್ದ ಕರ್ನಾಟಕದ ಯೋಧ ಸಂದೀಪ್ ಶೆಟ್ಟಿ ಹಿಮಪಾತಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ. ಸಂದೀಪ್ ಮೃತದೇಹ ಶುಕ್ರವಾರ ಪತ್ತೆಯಾಗಿದೆ. ಮೃತ ಯೋಧ ಸಂದೀಪ್ ನಿಶ್ಚಿತಾರ್ಥ ಮುಗಿಸಿ ಕರ್ತವ್ಯಕ್ಕೆ ತೆರಳಿದ್ದರು. ಏಪ್ರಿಲ್ 22 ರಂದು ನಿಶ್ಚಯವಾಗಿದ್ದ ಮದುವೆಗೆ ಎರಡು ತಿಂಗಳು ಮೊದಲೇ ಬರುವುದಾಗಿ ಹೇಳಿ ಹೋಗಿದ್ದರು. ಆದರೀಗ ಶವವಾಗಿ ಬರುತ್ತಿದ್ದಾರೆ. ತಮ್ಮ ಗ್ರಾಮದಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಏಕೈಕ ಯೋಧ ಸಂದೀಪ್ ಶೆಟ್ಟಿಯನ್ನು ಇತ್ತೀಚೆಗೆ ದೇವಸ್ಥಾನದ ಉದ್ಘಾಟನೆ ವೇಳೆ ಗ್ರಾಮಸ್ಥರು ಸನ್ಮಾನಿಸಿದ್ದರು.

ಹಾಸನ ಜಿಲ್ಲೆಯ ದೇವಿಹಳ್ಳಿ ಗ್ರಾಮದ ಸಂದೀಪ್ ಶೆಟ್ಟಿ, ಜಮ್ಮು ಕಾಶ್ಮೀರದ ಇನ್ಫೆಂಟ್ರಿ ರೆಜಿಮೆಂಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಉಂಟಾದ ಹಿಮಪಾತದಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ಸಂದೀಪ್ ಶೆಟ್ಟಿ ರವರ ಪಾರ್ಥೀವ ಶರೀರ ಭಾನುವಾರ ಸ್ವಗ್ರಾಮಕ್ಕೆ ತಲುಪಲಿದೆ.

ಹಿಮಪಾತಕ್ಕೆ ಸಿಲುಕಿ ಮೃತಪಟ್ಟವರ ಸಂಖ್ಯೆ 20 ಕ್ಕೇರಿದೆ. ತರಕಾರಿ ವ್ಯಾಪಾರ ನಡೆಸಿ ಜೀವನ ನಡೆಸುತ್ತಿದ್ದ ಸಂದೀಪ್ ಕುಟುಂಬದ ಆರ್ಥಿಕ ಪರಿಸ್ಥಿತಿ, ಸಂದೀಪ್ ಸೇನೆಗೆ ಸೇರಿದ ನಂತರ ಸುಧಾರಿಸಿತ್ತು. ಹಿಮಪಾತಕ್ಕೆ ಸಿಲುಕಿದ್ದ ಬೆಳಗಾವಿಯ ಮತ್ತೊಬ್ಬ ಯೋಧ ಮೇಜರ್ ಶ್ರೀಹರಿ ಕುಗಜಿ ಮೃತ್ಯುಕೂಪದಿಂದ ಪಾರಾಗಿ ಬಂದಿದ್ದಾರೆ.

English Summary: Sandeep Kumar Shetty, native of Devihalli near Hassan, is died in an avalanche at Gurez Valley in Jammu and Kashmir.

Related News

loading...
Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache