ವೀಡಿಯೋ ಪೋಸ್ಟ್ ಮಾಡಿದರೆ ಶಿಸ್ತುಕ್ರಮ |News Mirchi

ವೀಡಿಯೋ ಪೋಸ್ಟ್ ಮಾಡಿದರೆ ಶಿಸ್ತುಕ್ರಮ

ಸಮಸ್ಯೆಗಳೇನಿದ್ದರೂ ನೇರವಾಗಿ ತಮ್ಮನ್ನು ಭೇಟಿಯಾಗಬಹುದು. ಆದರೆ ಸಾಮಾಜಿಕ ತಾಣಗಳಲ್ಲಿ ವೀಡಿಯೋ ಅಪ್ಲೋಡ್ ಮಾಡಿದರೆ ಮಾತ್ರ ಶಿಸ್ತುಕ್ರಮ ಕೈಗೊಳ್ಳುತ್ತೇವೆ ಎಂದು ಸೈನಿಕರಿಗೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಎಚ್ಚರಿಸಿದ್ದಾರೆ.

ಸೈನಿಕರ ಸಮಸ್ಯೆಗಳನ್ನು ತಿಳಿಯಲು ಹೆಡ್ ಕ್ವಾರ್ಟರ್ಸ್ ನಲ್ಲಿ ದೂರು ಪೆಟ್ಟಿಗೆಗಳನ್ನು ಇಡುತ್ತೇವೆ, ಅವುಗಳ ಮೂಲಕ ಯೋಧರು ತಮ್ಮ ಸಮಸ್ಯೆಗಳನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಬಹುದು ಎಂದು ರಾವತ್ ಹೇಳಿದ್ದಾರೆ.

ಬಿಎಸ್ಎಫ್, ಸಿಆರ್‌ಪಿಎಫ್ ಯೋಧರು ಇತ್ತೀಚೆಗೆ ತಮ್ಮ ಸಮಸ್ಯೆಗಳನ್ನು ವೀಡಿಯೋ ಮಾಡಿ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಿದ್ದರ ಹಿನ್ನೆಲೆಯಲ್ಲಿ ಸೇನಾ ಮುಖ್ಯಸ್ಥರು ಈ ಎಚ್ಚರಿಕೆ ನೀಡಿದ್ದು, ಏನೇ ಸಮಸ್ಯೆ ಇದ್ದರೂ ಆಂತರಿಕವಾಗಿ ಬಗೆಹರಿಸಿಕೊಳ್ಳಬೇಕು ಎಂದರು.

Loading...
loading...
error: Content is protected !!