ಜಯಾ ಸಾವಿನ ಕುರಿತ ಯಾವುದೇ ತನಿಖೆಗೂ ಸಿದ್ಧ : ಶಶಿಕಲಾ |News Mirchi

ಜಯಾ ಸಾವಿನ ಕುರಿತ ಯಾವುದೇ ತನಿಖೆಗೂ ಸಿದ್ಧ : ಶಶಿಕಲಾ

ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಸಾವಿನ ಕುರಿತು ನಡೆಸುವ ಯಾವುದೇ ತನಿಖೆಗೂ ತಾನು ಸಿದ್ಧ ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ, ಜಯಲಲಿತಾ ಆಪ್ತ ಗೆಳತಿ ವಿ.ಕೆ.ಶಶಿಕಲಾ ಹೇಳಿದ್ದಾರೆ. ಜಯಾ ಸಾವಿನ ಕುರಿತು ಅನುಮಾನಗಳಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಆದೇಶಿಸುತ್ತಿದ್ದೇನೆ ಎಂದು ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಹೇಳಿದ್ದರು. ಅಷ್ಟೇ ಅಲ್ಲದೆ ಜಯಲಲಿತಾ ಆಸ್ಪತ್ರೆಯಲ್ಲಿದ್ದಾಗ ಅವರನ್ನು ನೋಡಲು ಶಶಿಕಲಾ ಅವಕಾಶ ನೀಡಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಶಶಿಕಲಾ, ಜಯಲಲಿತಾ ಅವರಿಗೆ ನಾನೇನೆಂಬುದು ಚೆನ್ನಾಗಿ ಗೊತ್ತು, ಹೀಗಾಗಿ ನಾನು ಯಾರಿಗೂ ಉತ್ತರಿಸುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.

ಇನ್ನು ಪನ್ನೀರ್ ಸೆಲ್ವಂ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿ ತಾನು ಗದ್ದುಗೆಯೇರಲು ತುದಿಗಾಲಲ್ಲಿ ನಿಂತಿರುವ ಶಶಿಕಲಾ, ತಮ್ಮನ್ನು ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಆಹ್ವಾನಿಸಿ ರಾಜ್ಯಪಾಲರು ಸಂವಿಧಾನದ ಘನತೆಯನ್ನು ಎತ್ತಿಹಿಡಿಯಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.

Loading...
loading...
error: Content is protected !!