ಶಶಿಕಲಾ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು – News Mirchi
We are updating the website...

ಶಶಿಕಲಾ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು

ದಿವಂಗತ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ರವರನ್ನು ಕೊಲೆ ಮಾಡಿದ್ದಾರೆಂಬ ಆರೋಪದ ಮೇಲೆ ಅಣ್ಣಾಡಿಎಂಕೆ ನಾಯಕಿ ಶಶಿಕಲಾ ಮತ್ತಿತರರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲು ಚೆನ್ನೈ ಪೊಲೀಸ್ ಕಮೀಷರ್ ಅವರಿಗೆ ಆದೇಶಿಸಬೇಕು ಎಂದು ಟ್ರಾಫಿಕ್ ರಾಮಸ್ವಾಮಿ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಒತ್ತಾಯ ಪೂರ್ವಕವಾಗಿ ಸಿಎಂ ಹುದ್ದೆಗೆ ತಮ್ಮಿಂ ರಾಜೀನಾಮೆ ಪಡೆಯಲಾಗಿದೆ, ಜಯಲಲಿತಾ ರವರನ್ನು ನೋಡಲು ತನಗೆ ಶಶಿಕಲಾ ಅವಕಾಶವೇ ನೀಡಲಿಲ್ಲ ಎಂದು ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಆರೋಪದ ಆಧಾರದ ಮೇಲೆ ಕೇಸು ದಾಖಲಿಸಿಕೊಳ್ಳಬೇಕು ಎಂದು ತೇನಾಂ ಪೇಟ ಪೊಲೀಸ್ ಠಾಣೆಯಲ್ಲಿ ರಾಮಸ್ವಾಮಿ ದೂರು ನೀಡಿದ್ದಾರೆ.

ಇನ್ನು ಜಯಲಲಿತಾ ಸಾವಿನ ಕುರಿತು ಸೃಷ್ಟಿಯಾಗಿರುವ ಅನುಮಾನಗಳಿಂದಾಗಿ ಜಯಾ ಸಾವಿನ ಕುರಿತು ವಿಚಾರಣೆ ನಡೆಸುವ ಜವಾಬ್ದಾರಿಯನ್ನು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರಿಗೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಹೇಳಿದ್ದಾರೆ.

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!