ಜಯಲಲಿತಾಗೆ ಹೃದಯಾಘಾತ, ಮತ್ತೆ ಐಸಿಯು’ನಲ್ಲಿ ಚಿಕಿತ್ಸೆ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ, ಎಐಎಡಿಎಂಕೆ ವರಿಷ್ಠೆ ಜಯಲಲಿತ ಅವರನ್ನು ಪುನಃ ಐಸಿಯು ನಲ್ಲಿ ದಾಖಲಿಸಿದ್ದಾರೆ. ಸಾಮಾನ್ಯ ವಾರ್ಡ್ ನಲ್ಲಿದ್ದ ಅವರಿಗೆ ಲಘು ಹೃದಯಾಘಾತ ಆಗಿದ್ದರಿಂದ, ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ.

ಇದಕ್ಕೂ ಮುನ್ನ ಜಯಲಲಿತ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು ಡಿಸೆಂಬರ್ 6 ರಂದು ಡಿಸ್ಚಾರ್ಜ್ ಆಗುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿತ್ತು. ಆದರೆ ಅಷ್ಟರಲ್ಲಿ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಹೃದಯಾಘಾತ ಸುದ್ದಿ ಹರಡುತ್ತಿದ್ದಂತೆ ಸಾವಿರಾರು ಕಾರ್ಯಕರ್ತರು ಆಸ್ಪತ್ರೆ ಮುಂದೆ ಸೇರಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ, ರಾಜ್ಯಪಾಲ ವಿದ್ಯಾಸಾಗರ್ ರಾವ್, ಮುಂಬಯಿಯಿಂದ ಚೆನ್ನೈಗೆ ಆಗಮಿಸುತ್ತಿದ್ದಾರೆ. ಮಧುರೈನಲ್ಲಿ ತುರ್ತು ಸಭೆಯನ್ನು ರದ್ದುಗೊಳಿಸಿದ ಡಿಜಿಪಿ ರಾಜೇಂದ್ರನ್, ಚೆನ್ನೈಗೆ ತೆರಳುತ್ತಿದ್ದಾರೆ. ಅಪೋಲೋ ಆಸ್ಪತ್ರೆ ಬಳಿ ಭದ್ರತೆ ಹೆಚ್ಚು ಮಾಡಲಾಗಿದೆ.