ಜಯಾ ಸತ್ತ ನಂತರ ಬೆರಳಚ್ಚು ಪಡೆದಿದ್ದರಾ? – News Mirchi
Jayalalitha

ಜಯಾ ಸತ್ತ ನಂತರ ಬೆರಳಚ್ಚು ಪಡೆದಿದ್ದರಾ?

ಉಪಚುನಾವಣೆಯಲ್ಲಿ ಸ್ಪರ್ಧಿಸಿದ ಅಣ್ಣಾಡಿಎಂಕೆ ಅಭ್ಯರ್ಥಿಗಳು ಬಿಫಾರಂ ಗಾಗಿ ಅಪೊಲೋ ಆಸ್ಪತ್ರೆಯಲ್ಲಿ ಅದಾಗಲೇ ಸಾವನ್ನಪ್ಪಿದ್ದ ಜಯಲಲಿತಾ ಅವರಿಂದ ಬೆರಳಚ್ಚು ಸಂಗ್ರಹಿಸಿದ್ದರಂತೆ. ಹೀಗೊಂದು ಆರೋಪ ಡಿಎಂಕೆ ವೈದ್ಯ ವಿಭಾಗದ ಕಾರ್ಯದರ್ಶಿ ಡಾಕ್ಟರ್ ಶರವಣನ್ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಆಧಾರಗಳನ್ನು ಜಯಾ ಸಾವಿನ ಕುರಿತು ತನಿಖೆ ನಡಿಸುತ್ತಿರುವ ತನಿಖಾ ಸಮಿತಿಗೆ ಬುಧವಾರ ಅವರು ನೀಡಿದ್ದಾರೆ.

ಜ್ವರ ಮತ್ತು ಡೀಹೈಡ್ರೇಷನ್ ನಿಂದ ಬಳಲುತ್ತಿದ್ದ ಜಯಲಲಿತಾರನ್ನು ಕಳೆದ ವರ್ಷ ಚೆನ್ನೈ ಅಪೊಲೋ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಆಕೆ ಆಸ್ಪತ್ರೆಯಲ್ಲಿದ್ದಾಗಲೇ ತಂಜಾವೂರು, ತಿರುಪ್ಪರಗುನ್ರಂ, ಅರವಕುರಿಚ್ಚಿ ವಿಧಾನಸಭೆಗಳಿಗೆ ಉಪಚುನಾವಣೆ ಎದುರಾಗಿತ್ತು. ತನ್ನ ವಿರೋಧಿ ಎ.ಕೆ.ಬೋಸ್ ಅವರ ನಾಮಪತ್ರದ ಮೇಲೆ ಸಾವನ್ನಪ್ಪಿದ್ದ ಜಯಾ ಅವರ ಬೆರಳಚ್ಚು ಹಾಕಿಸಲಾಗಿದೆ ಎಂದು ಶರವಣನ್ ಆರೋಪಿಸಿದ್ದಾರೆ.

ಜಯಾ ಬೆರಳಚ್ಚು ನೀಡಿರುವ ವಿಷಯಕ್ಕೆ ಸಂಬಂಧಿಸಿದಂತೆ ವಿಚಾರಣಾ ಆಯೋಗವು ಈಗಾಗಲೇ ಇಬ್ಬರು ಸರ್ಕಾರಿ ಅಧಿಕಾರಿಗಳಿಗೆ ನೋಟೀಸ್ ನೀಡಿದೆ.

ಜಯಲಲಿತಾ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಗ ಆಸ್ಪತ್ರೆ ಮತ್ತು ಸರ್ಕಾರ ಪ್ರಕಟಿಸುತ್ತಿತ್ತು. ಆಸ್ಪತ್ರೆಯಿಂದ ಜಯಾ ಬಯಸಿದಾಗ ಬಿಡುಗಡೆ ಮಾಡಲಾಗುತ್ತದೆ ಎಂದು ಆಸ್ಪತ್ರೆ ಮೂಲಗಳೂ ಹೇಳುತ್ತಿದ್ದವು. ಆದರೆ ನಂತರ ಜಯಲಲಿತಾ ಸಾವಿನ ಸುದ್ದಿ ಬಂದಿತ್ತು. ಆಕೆಯ ಸಾವಿನ ಹಿಂದೆ ನಿಗೂಢತೆ ಅಡಗಿದೆ ಎಂದು ರಾಷ್ಟ್ರಾದ್ಯಂತ ಅನುಮಾನಗಳು ಹೆಚ್ಚಾದವು. ಸಿಬಿಐ ತನಿಖೆಗೆ ಆದೇಶಿಸಬೇಕೆಂದು ನ್ಯಾಯಾಲಯದಲ್ಲಿ ಪಿಟೀಷನ್ ಗಳು ದಾಖಲಾದವು.

ಇದನ್ನೂ ಓದಿ: ಸುಖೋಯ್ ನಿಂದ ಅತ್ಯಾಧುನಿಕ ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆ ಯಶಸ್ವಿ

ನಂತರ ಜಯಾ ಸಾವಿನ ಕುರಿತು ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸರ್ಕಾರ ತನಿಖೆಗೆ ಸಮಿತಿಯೊಂದನ್ನು ರಚಿಸಿತು. ಜಯಾ ಆಸ್ಪತ್ರೆಗೆ ಸೇರಿದ ಕ್ಷಣದಿಂದ ಸಾವನ್ನಪ್ಪುವವರಿಗೆ ನಡೆದ ಘಟನೆಗಳ ಕುರಿತು ನವೆಂಬರ್ 22 ರೊಳಗೆ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಸಂಬಂಧಿಸಿದ ವ್ಯಕ್ತಿಗಳಿಗೆ ಸಮಿತಿ ಆದೇಶಿಸಿತು. ಜಯಾ ನಿವಾಸ ಪೋಯೆಸ್ ಗಾರ್ಡನ್ ಸಿಬ್ಬಂದಿ, ಅಪೋಲೋ ವೈದ್ಯರು, ಜಯಾಗೆ ಚಿಕಿತ್ಸೆ ನೀಡಿದ ಲಂಡನ್ ವೈದ್ಯರು, ಏಮ್ಸ್ ವೈದ್ಯರು, ಇಬ್ಬರು ಸರ್ಕಾರಿ ವೈದ್ಯರು, ಹಿರಿಯ ಅಧಿಕಾರಿಗಳು ಮುಂತಾದವರಿಗೆ ಸಮನ್ಸ್ ಜಾರಿ ಮಾಡಲಾಗಿದೆ.

Get Latest updates on WhatsApp. Send ‘Add Me’ to 8550851559

Loading...