ಜಯಲಲಿತಾ ರವರ ಪ್ರತಿ ತೀರ್ಮಾನದ ಹಿಂದೆ ಜೋತಿಷ್ಯ ಪ್ರಭಾವ

ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಕೊನೆಯುಸಿರಿರುವವರೆಗೂ ಜ್ಯೋತಿಷ್ಯ, ಸಂಖ್ಯಾಶಾಸ್ತ್ರದ ಕುರಿತು ಅಪಾರ ವಿಶ್ವಾಸ ಹೊಂದಿದ್ದರು.

ಜ್ಯೋತಿಷ್ಯರನ್ನು ಸಂಪರ್ಕಿಸದೇ ಯಾವ ತೀರ್ಮಾನವನ್ನೂ ತೆಗೆದುಕೊಳ್ಳುತ್ತಿರಲಿಲ್ಲ. ಯಾವುದೇ ಸಣ್ಣ ದೊಡ್ಡ ತೀರ್ಮಾನಗಳಾಗಲಿ ಪಂಚಾಂಗ ನೋಡಿಯೇ ಮುಂದುವರೆಯುತ್ತಿದ್ದರು.

ಮುಖ್ಯಮಂತ್ರಿಯಾಗಿ ಯಾವ ಹೊಸ ಯೋಜನೆಯನ್ನು ಆರಂಭಿಸಿದರೂ ಮೊದಲು ಜೋತಿಷಿಗಳನ್ನು ಸಂಪರ್ಕಿಸುತ್ತಿದ್ದರು. ಅವರ ಸಲಹೆಗಳ ಪ್ರಕಾರ ಹೊಸ ಯೋಜನೆಗಳಿಗೆ ದಿನಾಂಕ, ಸಮಯ ನಿಗದಿಪಡಿಸುತ್ತಿದ್ದರು. ಮುಹೂರ್ತ ಸರಿಯಿಲ್ಲವೆಂದು ಕೊನೆ ಕದಷಣದಲ್ಲಿ ಒಮ್ಮೆ ಜಯಲಲಿತಾ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮವನ್ನು ಮುಂದೂಡಿದ್ದರು. ಇದನ್ನೆಲ್ಲಾ ನೋಡಿದರೆ ಜಯಲಲಿತಾರವರಿಗೆ ಜ್ಯೋತಿಷ್ಯದ ಮೇಲೆ ಎಷ್ಟು ನಂಬಿಕೆ ಇತ್ತು ಎಂಬುದು ಅರ್ಥವಾಗುತ್ತದೆ.

2001 ರಲ್ಲಿ ಜಯಲಲಿತಾ ತಮ್ಮ ಹೆಸರಿನಲ್ಲಿ ಹೆಚ್ಚುವರಿಯಾಗಿ ಒಂದು ಇಂಗ್ಲೀಷ್ ಅಕ್ಷರ ‘ಎ’ ಸೇರಿಸಿಕೊಂಡಿದ್ದರು(Jayalalithaa). ಜ್ಯೋತಿಷಿಗಳ ಸಲಹೆಯ ಪ್ರಕಾರ ಜಯಾ ಅ ತೀರ್ಮಾನ ಕೈಗೊಂಡರು. ಜಯಲಲಿತಾ ಜಾತಕದ ಪ್ರಕಾರ ಅವರಿಗೆ 5, 7 ಸಂಖ್ಯೆಗಳು ಅನುಕೂಲಕರ.

ಕೊನೆಗೆ ಜಯಲಲಿತ 5 ನೇ ತಾರೀಖು ಕೊನೆಯುಸಿರೆಳೆದರು. ಆಕೆಯ ನಂಬಿಕೆಗಳಿಗೆ ಅನುಗುಣವಾಗಿಯೇ ಅಕೆಯ ಅಂತ್ಯ ಕ್ರಿಯೆಗಳನ್ನು ನಡೆಸುತ್ತಿದ್ದಾರೆ. ಮೊದಲು ಜಯಲಲಿತಾ ರವರಿಗೆ ಬುಧವಾರ ಅಂತ್ಯಕ್ರಿಯೆ ನಡೆಸಬೇಕೆಂದು ಯೋಚಿಸಿದ್ದರು. ಆದರೆ ಅಂದು ಅಷ್ಠಮಿ ಆದ್ದರಿಂದ ಅಂದು ಜಯಲಲಿತಾ ಯಾವುದೇ ಶುಭಕಾರ್ಯ ನಡೆಸುತ್ತಿರಲಿಲ್ಲ, ಹಾಗಾಗಿ ಇಂದೇ ಅಂತ್ಯಕ್ರಿಯೆಗೆ ಮುಂದಾಗಿದ್ದಾರೆ. ಇಂದು ಸಂಜೆ 4:30 ಕ್ಕೆ ಒಳ್ಳೆಯ ಮುಹೂರ್ತವಿದ್ದು, ಅ ಸಮಯದಲ್ಲಿಯೇ ಅಂತ್ಯಕ್ರಿಯೆಗೆ ತೀರ್ಮಾನಿಸಿದ್ದಾರೆ.