ಅಂದು ಜಯಾ ಸೋಲಿಗೆ ನಾನೇ ಕಾರಣ : ರಜನಿಕಾಂತ್ – News Mirchi

ಅಂದು ಜಯಾ ಸೋಲಿಗೆ ನಾನೇ ಕಾರಣ : ರಜನಿಕಾಂತ್

19996 ರ ಚುನಾವಣೆಯಲ್ಲಿ ಜಯಲಲಿತಾ ಪಕ್ಷ ಸೋಲಲು ತಾವೇ ಕಾರಣ ಎಂದು ತಮಿಳು ಸೂಪರ್ ಸ್ಟಾರ್ ರಜನೀಕಾಂತ್ ಹೇಳಿದ್ದಾರೆ. ನನ್ನ ಮಾತುಗಳಿಂದ ಜಯಲಲಿತಾ ಅಂದು ನೊಂದುಕೊಂಡಿದ್ದರು ಎಂದು ನೆನಪಿಸಿಕೊಂಡರು ರಜನಿ.

ಭಾನುವಾರ ನಡೀಗರ್ ಸಂಘಮ್ ಆಯೋಜಿಸಿದ್ದ ಜಯಲಲಿತಾ ರವರ ಸಂತಾಪ ಸೂಚಕ ಸಭೆಯಲ್ಲಿ ಪಾಲ್ಗೊಂಡಿದ್ದ ರಜನಿ, 1996 ರಲ್ಲಿ ಜಯಾ ಅವರ ಎಐಎಡಿಎಂಕೆ ವಿರುದ್ಧ ತಾವು ಮಾಡಿದ ಭಾಷಣವೇ ಅವರ ಸೋಲಿಗೆ ಪ್ರಮುಖ ಕಾರಣವಾಯಿತು. ಅಂದಿನ ವಿಧಾನಸಭೆ ಚುನಾವಣೆ ವೇಳೆ ‘ಮತ್ತೆ ಜಯಾಗೆ ಮತ ಹಾಕಿದರೆ ತಮಿಳುನಾಡನ್ನು ಯಾರೂ ಕಾಪಾಡಲಾರರು’ ಎಂದು ರಜನಿ ಹೇಳಿದ್ದರು.

ಭಾನುವಾರ ಸಂತಾಪ ಸೂಚಕ ಸಭೆಯಲ್ಲಿ ಜಯಲಲಿತಾರನ್ನು ಕೊಹಿನೂರ್ ಡೈಮಂಡ್ ಎಂದು ಹೊಗಳಿದ ರಜನಿ, ತನ್ನ ಆಹ್ವಾನವನ್ನು ಸ್ವೀಕರಿಸಿ ತಮ್ಮ ಮಗಳ ಮದುವೆಗೆ ಅಂದು ಅಮ್ಮ ಬಂದಿದ್ದು ಆಶ್ಚರ್ಯ ತಂದಿತು ಎಂದು ಹೇಳಿದರು.

Loading...

Leave a Reply

Your email address will not be published.