ತನ್ನ ಹತ್ಯೆಗೆ ಸಂಚು ನಡೆಸಿದ್ದರು: ಜಯಾ ಸೊಸೆ ದೀಪಾ – News Mirchi

ತನ್ನ ಹತ್ಯೆಗೆ ಸಂಚು ನಡೆಸಿದ್ದರು: ಜಯಾ ಸೊಸೆ ದೀಪಾ

ತಮಿಳುನಾಡು ದಿವಂಗತ ಮುಖ್ಯಮಂತ್ರಿ ಜಯಲಲಿತಾ ವಾರಸುದಾರರ ಹೋರಾಟ ಮತ್ತೊಂದು ತಿರುವು ಪಡೆದಿದೆ. ಜಯಲಲಿತಾ ವಾರಸುದಾರರು ತಾವೇ ಎಂದು ಜಯಾ ಸೋದರ ಸೊಸೆ ದೀಪಾ ಜಯಕುಮಾರ್ ಹೇಳಿದ್ದಾರೆ. ಅಷ್ಟೇ ಅಲ್ಲದೆ ತನ್ನ ತಮ್ಮ ದೀಪಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಶಿಕಲಾ ಬಣದೊಂದಿಗೆ ಕೈ ಜೋಡಿಸಿದ ದೀಪಕ್ ತನಗೆ ಮೋಸ ಮಾಡಿದ್ದಾನೆ ಎಂದು ದೀಪಾ ಆರೋಪಿಸಿದ್ದಾರೆ.

ತನ್ನನ್ನು ಹತ್ಯೆ ಮಾಡಲು ಸಂಚು ನಡೆಯುತ್ತಿದೆ ಎಂದು ಅನುಮಾನ ವ್ಯಕ್ತಿಪಡಿಸಿರುವ ದೀಪಾ, ಹತ್ಯೆ ಮಾಡಲೆಂದೇ ತನ್ನನ್ನು ಮುಂಜಾನೆ ಪೋಯೆಸ್ ಗಾರ್ಡನ್ ಗೆ ಬರಲು ಕರೆದಿದ್ದಾರೆ ಎಂದು ಆರೋಪಿಸಿದ್ದಾರೆ. ಪೋಯೆಸ್ ಗಾರ್ಡನ್ ಗೆ ಸಂಬಂಧಿಸಿದ ದಾಖಲೆಗಳೆಲ್ಲಾ ನನ್ನ ಬಳಿ ಇವೆ. ಹೀಗಾಗಿಯೇ ತಮ್ಮನ್ನು ಟ್ರ್ಯಾಪ್ ಮಾಡಿ ಹತ್ಯೆ ಮಾಡಲು ಸಂಚು ನಡೆಸಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭಾನುವಾರ ಮುಂಜಾನೆ 5:30 ಗಂಟೆಗೆ ದೀಪಾರವರಿಗೆ ಫೋನ್ ಮಾಡಿದ್ದ ದೀಪಕ್ ಪೋಯೆಸ್ ಗಾರ್ಡನ್ ಗೆ ಬರುವಂತೆ ಹೇಳಿದ್ದರಂತೆ. ಆದರೆ ಅಲ್ಲಿಗೆ ಹೋದಾಗ ಒಳಗೆ ಬಿಡಲು ನನಗೆ ಅವಕಾಶ ನೀಡಲಿಲ್ಲ ಎಂದು ದೀಪ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು. ಪೊಲೀಸರು ಆಕೆಯನ್ನು ಪೋಯೆಸ್ ಗಾರ್ಡನ್ ಗೆ ಕಾಲಿಡಲು ಅವಕಾಶ ನೀಡದ್ದರಿಂದ ದೀಪಾ ಹಾಗೂ ಬೆಂಬಲಿಗರು ಪ್ರತಿಭಟನೆಗಿಳಿದರು. ಜಯಲಲಿತಾ ರವರ ಅಸಲಿ ವಾರಸುದಾರರು ತಾವೇ ಎಂದು ಆಕೆ ಹೇಳಿದರು. ಪೋಯೆಸ್ ಗಾರ್ಡನ್ ನಲ್ಲಿನ ವಸ್ತುಗಳು ಒಂದೊಂದಾಗಿ ಮಾಯವಾಗುತ್ತಿವೆ ಎಂದು ದೀಪಾ ಆರೋಪಿಸಿದರು.

Loading...