ಶಶಿಕಲಾ, ಜಯಲಲಿತಾ ಬಗ್ಗೆ ಸ್ವಾಮಿ ಹೇಳಿದ್ದೇನು?

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ನಿಧನದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ನಾಯಕ ಸುಬ್ರಮಣ್ಯ ಸ್ವಾಮಿ, ತಮಿಳುನಾಡಿನ ಜನ ಒಪ್ಪಿಕೊಳ್ಳುವಂತಹ ಬಿಜೆಪಿ ನಾಯಕ ತಮಿಳುನಾಡಿನಲ್ಲಿ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ನೂತನ ಮುಖ್ಯಮಂತ್ರಿ ಒ. ಪನ್ನೀರ್ ಸೆಲ್ವಮ್ ಕುರಿತು ಕೇಳಿದ ಪ್ರಶ್ನೆಗೆ, ಜಯಲಲಿತ ಗೆಳತಿ ಶಶಿಕಲಾ ಮಾತಿನಂತೆ ಪನ್ನೀರ್ ಸೆಲ್ವಮ್ ನಡೆಯದಿದ್ದರೆ ಎಐಡಿಎಂಕೆ ಪಕ್ಷ ಹೋಳಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

ತನ್ನ ಬಗ್ಗೆ ಜಯಲಲಿತಾ ರವರಿಗೆ ಅಪಾರ ಗೌರವವಿತ್ತು, ಆದರೆ ಜಯಲಲಿತಾ ಮೇಲಿದ್ದ ಶಶಿಕಲಾಳ ದುಷ್ಟ ಪ್ರಭಾವ ಅದನ್ನೆಲ್ಲಾ ಹಾಳು ಮಾಡಿತು. ಪ್ರತಿಯೊಂದು ವಿಷಯವೂ ಶಶಿಕಲಾ ನಿಯಂತ್ರಣದಲ್ಲಿತ್ತು ಎಂದು ಸ್ವಾಮಿ ಆರೋಪಿಸಿದರು. ಜಯಲಲಿತಾ ವೈಯುಕ್ತಿಕ ಜೀವನದಲ್ಲಿ ಅಸಂತೃಪ್ತಿ ಹೊಂದಿದ್ದರು, ಶಶಿಕಲಾ ಪ್ರಭಾವದಲ್ಲೇ ಜಯಲಲಿತಾ ಕೊನೆಯವರೆಗೂ ಇದ್ದರು ಎಂದರು.