ಜೆಡಿಎಸ್ ತೊರೆದು ಸುಧಾಕರ್ ಬಣ ಸೇರಿದ ಜಬೀನಾ ತಾಜ್

ಜೆ.ಡಿ.ಎಸ್ ಎರಡನೇ ವಿಕೆಟ್ ಪತನ, ಸುಧಾಕರ್ ಬಣ ಸೇರಿದ ಜಬೀನಾ ತಾಜ್

ಚಿಂತಾಮಣಿ, ಫೆ.15: ಚಿಂತಾಮಣಿ ನಗರಸಭೆಯ ಜೆಡಿಎಸ್ ಬೆಂಬಲಿತ ನಗರಸಭೆ ಸದಸ್ಯೆ ಜಬೀನಾ ತಾಜ್ ಇಂದು ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಬಣಕ್ಕೆ ಸೇರ್ಪಡೆಯಾದರು.

ಕ್ಷೇತ್ರದ ಜೆಡಿಎಸ್ ಪಕ್ಷದಲ್ಲಿ ಹಿರಿಯ ನಾಯಕರಿಗೆ, ಚುನಾಯಿತ ಪ್ರತಿನಿಧಿಗಳಿಗೆ ಮರ್ಯಾದೆ ಇಲ್ಲದಂತಾಗಿದೆ ಎಂದು ಆರೋಪಿಸಿದ ಸದಸ್ಯೆ, ತಮ್ಮ ವಾರ್ಡಿನಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಾಗದ ಕಾರಣ ಬೇಸತ್ತು ಜೆಡಿಎಸ್ ತೊರೆದು ಸುಧಾಕರ್ ಬಣಕ್ಕೆ ಸೇರ್ಪಡೆಯಾಗಿರುವುದಾಗಿ ಹೇಳಿದರು. ನಗರದ 26 ನೇ ವಾರ್ಡ್ ಅನ್ನು ಜಬೀನಾ ತಾಜ್ ಪ್ರತಿನಿಧಿಸುತ್ತಿದ್ದಾರೆ.

ಜೆಡಿಎಸ್ ವಿಕಾಸ ಪರ್ವಕ್ಕೆ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ತೆರಳಬೇಕು : ರಾಜಗೋಪಾಲ್

ನಗರಸಭೆ ಸದಸ್ಯೆ ಜಬೀನಾ ತಾಜ್ ರವರ ಸ್ವಗೃಹಕ್ಕೆ ಆಗಮಿಸಿದ ಮಾಜಿ ಶಾಸಕ ಡಾ. ಎಂ.ಸಿ.ಸುಧಾಕರ್ ರವರು, ಜಬೀನಾ ತಾಜ್ ಹಾಗೂ ಅವರ ಪತಿ ಸರ್ಧಾರ್ ರವರಿಗೆ ಹೂಮಾಲೆ ಹಾಕುವ ಮೂಲಕ ತಮ್ಮ ಬಣಕ್ಕೆ ಸೇರ್ಪಡೆ ಮಾಡಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಜಬೀನಾ ತಾಜ್, ನಾನು ನಗರಸಭೆ ಸದಸ್ಯೆಯಾದಾಗಿನಿಂದ ನಮ್ಮ ವಾರ್ಡ್ ನಲ್ಲಿ ಯಾವುದೇ ರೀತಿಯ ಅಭಿವೃದ್ದಿ ಕಾರ್ಯಗಳನ್ನು ಮಾಡದ ಕಾರಣ ಹಾಗೂ ಜೆ.ಡಿ.ಎಸ್ ಪಕ್ಷದಲ್ಲಿ ತನಗೆ ಮರ್ಯಾದೆ ಇಲ್ಲದ ಕಾರಣ ಸುಧಾಕರ್ ಬಣಕ್ಕೆ ಸೇರ್ಪಡೆಗೊಂಡಿರುವುದಾಗಿ ತಿಳಿಸಿದರು.

ತಾವು ಯಾವುದೇ ರೀತಿಯಾಗಿ ನಗರಸಭೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದ ಸದಸ್ಯೆ, ಜೆ.ಡಿ.ಎಸ್ ಪಕ್ಷದಲ್ಲಿ ತಮಗೆ ಬೆಲೆ ಇಲ್ಲದ್ದು ಹಾಗೂ ತಮ್ಮ ವಾರ್ಡಿನಲ್ಲಿ ಅಭಿವೃದ್ದಿ ಕಾರ್ಯಗಳು ನಡೆಯದ ಹಿನ್ನಲೆಯಲ್ಲಿ ಮತ್ತು ಮಾಜಿ ಶಾಸಕ ಸುಧಾಕರ್ ರವರ ಅಭಿವೃದ್ದಿ ಕಾರ್ಯಗಳನ್ನು ಮೆಚ್ಚಿ ತಾವು ಅವರ ಬಣಕ್ಕೆ ಸೇರ್ಪಡೆಯಾಗುತ್ತಿರುವುದಾಗಿ ತಿಳಿಸಿದರು.

ಬಡಗವಾರಹಳ್ಳಿಯಲ್ಲಿ ಭಕ್ತಿ ಭಾವಾವೇಶ ಮೇಳೈಸಿದ ಕೋಟಿ ಶಿವನಾಮ ಜಪಯಜ್ಞ

ಮಾಜಿ ಶಾಸಕ ಡಾ. ಎಂ.ಸಿ.ಸುಧಾಕರ್ ಮಾತನಾಡುತ್ತಾ, ಹಾಲಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿಯವರು ನಗರ ಸೇರಿದಂತೆ ತಾಲೂಕಿನಾಧ್ಯಂತ ಅಭಿವೃದ್ಧಿ ಮಾಡುವುದನ್ನು ಮರೆತು ಕಾಲಹರಣ ಮಾಡುತ್ತಿದ್ದು, ನಗರ ಹಾಗೂ ತಾಲ್ಲೂಕಿನ ಅಭಿವೃದ್ದಿ ಕುಂಠಿತವಾಗಿದೆ. ಇದರಿಂದಾಗಿ ನಗರ ಸೇರಿದಂತೆ ತಾಲೂಕಿನ ಜನತೆ ಮುಂದಿನ ಚುನಾವಣೆಯಲ್ಲಿ ಜೆ.ಕೆ ಕೃಷ್ಣಾರೆಡ್ಡಿಯವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಸಾಕ್ಷಿ ನಾಶಕ್ಕೆ ಯತ್ನ: ಪವರ್ ಮಿನಿಸ್ಟರ್ ಗೆ ಬಂಧನದ ಭೀತಿ

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಅಬ್ಬುಗುಂಡು ಶ್ರೀನಿವಾಸರೆಡ್ಡಿ, ಶ್ರೀನಾಥ್ ಬಾಬುರೆಡ್ಡಿ, ನಿಸಾರ್ ಷಾ, ರತ್ನಮ್ಮ, ಇಲಿಯಾಜ್, ದೇವರಾಜ್, ತೌಡ್ ಮಂಜುನಾಥ್, ಕಲಾಯಿ ಶ್ರೀನಿವಾಸ್, ಅಲ್ಲಾ ಬಕಾಷ್, ಮುಖಂಡರಾದ ಮಂಜುನಾಥ್‍ ಅಯ್ಯರ್, ನಾಗರಾಜ್, ವರದರಾಜು, ಮೂನ್‍ ಸ್ಟಾರ್ ಗೌಸ್, ಸೀನಪ್ಪ, ಲಪಾಟ್ ಶ್ರೀನಿವಾಸ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Get Latest updates on WhatsApp. Send ‘Subscribe’ to 8550851559