ವಿಕಾಸ ಪರ್ವಕ್ಕೆ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ತೆರಳಬೇಕು : ರಾಜಗೋಪಾಲ್

ಚಿಂತಾಮಣಿ, ಫೆ.15: ಫೆ. 17 ರ ಶನಿವಾರ ಮಧ್ಯಹ್ನ 2 ಗಂಟೆಗೆ ಬೆಂಗಳೂರಿನ ಯಲಹಂಕದ ನಿಟ್ಟೆ ಮೀನಾಕ್ಷಿ ಕಾಲೇಜು ಮುಖ್ಯ ರಸ್ತೆಯಲ್ಲಿ ನಡೆಯಲಿರುವ ಬೃಹತ್ ವಿಕಾಸ ಪರ್ವ ಸಮಾವೇಶಕ್ಕೆ ತಾಲೂಕಿನ ಜೆಡಿಎಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ತೆರಳಬೇಕೆಂದು ಜೆಡಿಎಸ್ ಚಿಂತಾಮಣಿ ತಾಲೂಕು ಅಧ್ಯಕ್ಷ ಟಿ.ಎನ್.ರಾಜಗೋಪಾಲ್ ಹೇಳಿದ್ದಾರೆ.

ನಗರ ಹೊರವಲಯದ ಕಡಪ ರಸ್ತೆಯಲ್ಲಿರುವ ಜೆಡಿಎಸ್ ನೂತನ ಕಛೇರಿ ಕಟ್ಟಡದ ಬಳಿ ವಿಕಾಸ ಪರ್ವ ಕುರಿತು ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ತಾಲೂಕಿನ ಎಲ್ಲಾ ಪಂಚಾಯ್ತಿಗಳಿಂದ ಜೆಡಿಎಸ್ ಕಾರ್ಯಕರ್ತರು ಭಾಗವಹಿಸಬೇಕೆಂದು ಇದಕ್ಕೆ ಪಕ್ಷದ ವತಿಯಿಂದ ವಾಹನ ಸೌಲಭ್ಯಗಳನ್ನು ಮಾಡಲಾಗುವುದೆಂದರು. ವಾಹನಗಳನ್ನು ಹೊಂದಿರುವ ತಾಲೂಕಿನ ಕಾರ್ಯಕರ್ತರು ತಮ್ಮ ವಾಹನಗಳಲ್ಲಿ ತಮ್ಮವರನ್ನು ಕರೆತರಬೇಕೆಂದು ಮನವಿ ಮಾಡಿದ್ದಾರೆ.

ತಾಲೂಕು ಜೆಡಿಎಸ್‍ನಲ್ಲಿನ ಗೊಂದಲಕ್ಕೆ ತಿಲಾಂಜಲಿಯಿಟ್ಟ ನಾಯಕರು

ತಾಲೂಕಿನ ಜೆಡಿಎಸ್‍ ಮುಖಂಡರಲ್ಲಿ ಹಲವು ತಿಂಗಳುಗಳಿಂದ ಭಿನ್ನಮತವಿದ್ದು, ಪಕ್ಷದಲ್ಲಿ ಒಡಕುಂಟಾಗಿದೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಕೆಲವು ದಿನಗಳಿಂದ ಜೆಡಿಎಸ್ ನ ತಾಲೂಕು ಅಧ್ಯಕ್ಷ ತಳಗವಾರ ರಾಜಗೋಪಾಲ್, ಯುವ ಘಟಕ ಅಧ್ಯಕ್ಷ ಗೋಪಲ್ಲಿ ರಘು, ಶ್ರೀನಿವಾಸರೆಡ್ಡಿ(ಜ್ಯೂಸ್ ರೆಡ್ಡಿ), ಕರ್ನಾಟಕ ಉಪಾಧ್ಯಕ್ಷ ಕುರುಬೂರು ರವೀಂದ್ರ ಗೌಡ ಮುಂತಾದವರು ಪಕ್ಷದ ಚಟುವಟಿಕೆಗಳಿಂದ ದೂರವಿದ್ದರು. ಆದರೆ ಇಂದಿನ ಪೂರ್ವಭಾವಿ ಸಭೆಯಲ್ಲಿ ಭಿನ್ನಮತೀಯರೆಲ್ಲರೂ ಒಂದಾಗಿ ಸಭೆಯಲ್ಲಿ ಭಾಗವಹಿಸಿದ್ದರು. ತಾಲೂಕಿನ ಎಲ್ಲಾ ಮುಖಂಡರು ಒಗ್ಗಟಿನ ಮಂತ್ರ ಜಪಿಸುವ ಮೂಲಕ ಭಿನ್ನಮತಕ್ಕೆ ಸದ್ಯಕ್ಕೆ ತಿಲಾಂಜಲಿ ಹಾಡಿದ್ದಾರೆ.

ಬಡಗವಾರಹಳ್ಳಿಯಲ್ಲಿ ಭಕ್ತಿ ಭಾವಾವೇಶ ಮೇಳೈಸಿದ ಕೋಟಿ ಶಿವನಾಮ ಜಪಯಜ್ಞ

ವಿಕಾಸ ಪರ್ವ ಪೂರ್ವಭಾವಿ ಸಭೆಯಲ್ಲಿ ತಾ.ಪಂ.ಸದಸ್ಯರಾದ ಹೆಚ್.ನಾರಾಯಣಸ್ವಾಮಿ, ಮುರಗಮಲೈ ನರಸಿಂಹಮೂರ್ತಿ(ರಾಜಣ್ಣ), ಮಾಜಿ ಜಿ.ಪಂ ಸದಸ್ಯರಾದ ಗುಡೇ ಶ್ರೀನಿವಾಸರೆಡ್ಡಿ, ಶೇಖ್‍ಮೌಲ, ನಗರಸಭೆ ಸದಸ್ಯರಾದ ಆರ್.ಪ್ರಕಾಶ್, ಶಫೀಕ್, ಕೃಷ್ಣಪ್ಪ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಬಿ.ವಿ.ಮಂಜುನಾಥಾಚಾರಿ, ತಾ. ಯುವ ಘಟಕದ ಅಧ್ಯಕ್ಷ ಗೋಪಲ್ಲಿ ರಘುನಾಥರೆಡ್ಡಿ, ಮುಖಂಡರಾದ ಅಂಕಾಲಮಡಗು ಕೃಷ್ಣಮೂರ್ತಿ, ಶ್ರೀರಾಮರೆಡ್ಡಿ (ಜ್ಯೂಸ್‍ರೆಡ್ಡಿ), ಯನಮಲಪಾಡಿ ಚಂದ್ರಾರೆಡ್ಡಿ, ಈಶ್ವರ್, ಕೈವಾರ ಸುಬ್ಬಾರೆಡ್ಡಿ ಬನ್ನಹಳ್ಳಿ ರವಿ, ವಿ.ಅಮರ್ ಸೇರಿದಂತೆ ಎಪಿಎಂಸಿ ಸದಸ್ಯರು, ತಾಲೂಕಿನ ಜೆಡಿಎಸ್ ಪ್ರಮುಖ ಪಧಾಧಿಕಾರಿಗಳು ಹಾಗೂ ಗಣ್ಯರು ಭಾಗವಹಿಸಿದ್ದರು.

ಕೃಷಿ ಹೊಂಡಕ್ಕೆ ಹಾರಿ ತಾಯಿ ಮಗಳ ಆತ್ಮಹತ್ಯೆ

ಚಿಂತಾಮಣಿ ಹೋರವಲಯದ ಕಡಪ ರಸ್ತೆಯಲ್ಲಿರುವ ಜೆಡಿಎಸ್ ನೂತನ ಕಟ್ಟಡ ಬಳಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿರುವ ತಾಲೂಕು ಅಧ್ಯಕ್ಷ ಟಿ.ಎನ್.ರಾಜಗೋಪಾಲ್.

ವೀಡಿಯೋ

Get Latest updates on WhatsApp. Send ‘Subscribe’ to 8550851559