ಜೀಸಸ್ ಎಂದರೆ ಕರುಣಾಮಯಿ

ಎರಡು ಸಾವಿರ ವರ್ಷಗಳ ಹಿಂದೆ ಜೀಸಸ್ ಎಂಬ ವ್ಯಕ್ತಿ ಭೂಮಿಯ ಮೇಲೆ ಸಂಚರಿಸಿದ್ದ ಎಂಬ ಮಾತಿನಲ್ಲಿ ಸಂದೇಹವಿಲ್ಲ. ಆತನನ್ನು ದೇವಪುತ್ರ ಎಂದು ಭಾವಿಸಿದರೂ, ಭಾವಿಸದಿದ್ದರೂ ತನ್ನ ವ್ಯಕ್ತಿತ್ವದಿಂದ ಈ ಭೂಮಿಯ ಮೇಲೆ ಸ್ಪಷ್ಟವಾದ ಛಾಪು ಮೂಡಿಸಿದ್ದರು ಎಂಬುದರಲ್ಲಿ ಅನುಮಾನವಿಲ್ಲ. ಆದ್ದರಿಂದಲೇ ಜೀಸಸ್ ಭೋಧನೆ ಮಾತ್ರವಲ್ಲ, ಆತನ ಜೀವನವನ್ನು ಗಮನಿಸಿದರೂ ಅನೇಕ ಪಾಠಗಳು ಕಂಡುಬರುತ್ತವೆ.

ಜೀಸಸ್ ಎಂದ್ರೆ ನಮ್ಮ ದೃಷ್ಟಿಯಲ್ಲಿ ಕರುಣಾಮಯಿ. ತನ್ನ ಬಳಿಗೆ ಬಂದವರು ಎಂತಹವರೇ ಆಗಿರಲಿ, ಅವರನ್ಮು ತನ್ನವರಂತೆ ಭಾವಿಸಿದ್ದ. ಅನಾರೋಗ್ಯದಿಂದ ಬಳಲುತ್ತಿದ್ದವರನ್ನು ಗುಣಪಡಿಸಿದ, ಕಷ್ಟದಲ್ಲಿದ್ದವರಿಗೆ ಸಾಂತ್ವನ ಹೇಳಿದ. ನೆರೆಹೊರೆಯವರನ್ನು ಪ್ರೀತಿಸಿ ಎಂದು ಭೋದಿಸಿದ. ತನ್ನನ್ನು ಶಿಕ್ಷಿಸಿದವರನ್ನು ಕ್ಷಮಿಸುವಂತೆ ಭಗವಂತನಲ್ಲಿ ಪ್ರಾರ್ಥಿಸಿದ.

ಜೀವಕ್ಕೆ ತೊಂದರೆಯಿದೆ ಎಂದು ಹಲವರು ಎಚ್ಚರಿಸಿದರೂ ಹೆದರದೇ ತಾನು ಹೇಳಬಯಸಿದ್ದ ವಿಷಯಗಳನ್ನು ಹೇಳುತ್ತಲೇ ಮುಂದೆ ಸಾಗಿದರು. ತನ್ನನ್ನು ಬಂಧಿಸಲು ಕಾಯುತ್ತಿದ್ದಾರೆ ಎಂದು ತಿಳಿದರೂ ಯಾವುದೇ ಅಂಜಿಕೆಯಿಲ್ಲದೇ ಗೆತ್ಸೆಮನೇ ತೋಟಕ್ಕೆ ಹೋದರು.

ಯೇಸುವಿನ ಮಾತುಗಳು ಕಹಿ ಸತ್ಯಗಳಿಂದ ತುಂಬಿದ್ದವು. ರಾಜನಾದರೂ, ಬಡವನಾದರೂ ಅವರ ಮುಂದೆ ಒಂದೇ ರೀತಿ ವರ್ತಿಸಿದರು. ತನ್ನನ್ನು ನಂಬಿದವರು ಅಸಂಖ್ಯಾತ ಜನರಿದ್ದರೂ ತಾನು ಭಗವಂತನ ಪುತ್ರನೆಂದರೇ ಹೊರತು, ಸಾಕ್ಷತ್ ದೇವರು ಎಂದು ಎಲ್ಲೂ ಹೇಳಲಿಲ್ಲ. ಹೊಗಳಿಕೆಗಳಿಗೆ ಅತೀತರಾಗಿ ಅವರ ಜೀವನ ಮುಂದುವರೆದಿತ್ತು.

Loading...

Leave a Reply

Your email address will not be published.

error: Content is protected !!