“ಮೇಕ್ ಇನ್ ಇಂಡಿಯಾ” ಅಡಿಯಲ್ಲಿ ಎಫ್-16 ಯುದ್ಧವಿಮಾನಗಳು?

ಎಫ್-16 ಯುದ್ಧ ವಿಮಾನಗಳನ್ನು ಭಾರತದಲ್ಲಿಯೇ ತಯಾರಿಸಲು ಅಮೆರಿಕದ ರಕ್ಷಣಾ ಉತ್ಪನ್ನಗಳ ಸಂಸ್ಥೆ ಲಾಕ್ ಹೀಡ್ ಮುಂದೆ ಬಂದಿದೆ. ಭಾರತೀಯ ವಾಯುಸೇನೆಯಿಂದ ಈ ಯುದ್ಧ ವಿಮಾನಗಳಿಗೆ ಬೇಡಿಕೆ ಬಂದರೆ “ಮೇಕ್ ಇನ್ ಇಂಡಿಯಾ” ಯೋಜನೆಯಡಿ ಭಾರತದಲ್ಲಿಯೇ ಉತ್ಪಾದಿಸುತ್ತೇವೆ ಎಂದು ಹೇಳಿದೆ.

ಅಷ್ಟೇ ಅಲ್ಲದೆ ಭಾರತದಿಂದಲೇ ಇವುಗಳನ್ನು ಬೇರೆ ದೇಶಗಳಿಗೆ ರಫ್ತು ಮಾಡುವುದಾಗಿ ಹೇಳಿದೆ. ಆದರೆ ವಾಯುಸೇನೆಗೆ 100 ಎಫ್-16 ಜೆಟ್ ವಿಮಾನಗಳನ್ನು ಸರಬರಾಜು ಮಾಡುವ ಆರ್ಡರ್ ಗಾಗಿ ಸ್ವೀಡನ್ ಕಂಪನಿ ಸಾಬ್ ಜೊತೆ ಲಾಕ್ ಹೀಡ್ ಸ್ಪರ್ಧೆ ಎದುರಿಸುತ್ತಿದೆ. ಈ ವಿಮಾನಗಳ ನಿರ್ಮಾಣ ಕೇಂದ್ರವನ್ನು ಭಾರತಕ್ಕೆ ವರ್ಗಾಯಿಸುವ ಲಾಕ್ ಹೀಡ್ ಪ್ರಸ್ತಾವನೆಗೆ ಅಮೆರಿಕಾ ಸರ್ಕಾರ ಈಗಾಗಲೇ ಅಂಗೀಕಾರ ನೀಡಿದೆ.