ಪ್ರೀತಿಸಲಿಲ್ಲವೆಂದು 15 ವರ್ಷದ ಬಾಲಕಿಯ ಕೈ ಕತ್ತರಿಸಿದ ಪಾಪಿ |News Mirchi

ಪ್ರೀತಿಸಲಿಲ್ಲವೆಂದು 15 ವರ್ಷದ ಬಾಲಕಿಯ ಕೈ ಕತ್ತರಿಸಿದ ಪಾಪಿ

ಲಕ್ನೋ: ಹಾಡುಹಗಲು ನಡು ರಸ್ತೆಯಲ್ಲಿ ನೂರಾರು ಜನರು ನೋಡುತ್ತಿರುವಂತೆಯೇ 15 ವರ್ಷದ ಬಾಲಕಿಯ ಕೈಯನ್ನು ಕತ್ತರಿಸಿದ್ದಾನೆ ಒಬ್ಬ ಪಾಪಿ. ಹಲವು ತಿಂಗಳಿನಿಂದ ಆಕೆಯ ಸುತ್ತಾ ಸುತ್ತುತ್ತಾ ಪ್ರೀತಿಸುತ್ತಿದ್ದೇನೆಂದರೂ ಸ್ಪಂದಿಸಲಿಲ್ಲವೆಂದು ಆಕ್ರೋಶಗೊಂಡ ಯುವಕನೊಬ್ಬ ಈ ಹೇಯ ಕೃತ್ಯವೆಸಗಿದ್ದಾನೆ. ಉತ್ತರ ಪ್ರದೇಶದ ಬಾಲಿಯಾದ ಲಖೀಂಪುರ್ ಖೇರ್ ಎಂಬ ಮಾರುಕಟ್ಟೆಯಲ್ಲಿ ಸಹೋದರನೊಂದಿಗೆ ಬಾಲಕಿ ಶಾಪಿಂಗ್ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ವಿನೋದ್ ಚೌರಾಸಿಯಾ(19) ಸ್ಥಳೀಯ ವೆಲ್ಡಿಂಗ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಕೆಲ ತಿಂಗಳುಗಳಿಂದ ಬಾಲಕಿ(15)ಯನ್ನು ಪ್ರೀತಿಸುತ್ತಿದ್ದೇನೆಂದು ಬೆನ್ನು ಬಿದ್ದಿದ್ದ. ತನಗೆ ಇಷ್ಟವಿಲ್ಲವೆಂದರೂ ಆತ ಕೇಳುತ್ತಿರಲಿಲ್ಲ. ಹೀಗಿದ್ದಾಗ ಬುಧವಾರ ಆಕೆ ಲಖೀಂಪುರ್ ಖೇರಿಯಲ್ಲಿರುವ ಮಾರುಕಟ್ಟೆಗೆ ತನ್ನ ಸಹೋದರನೊಂದಿಗೆ ಶಾಪಿಂಗ್ ಗೆ ಬಂದಳು. ಇದನ್ನು ಕಂಡ ವಿನೋದ್, ತನ್ನ ಪ್ರೀತಿಯನ್ನು ಅಂಗೀಕರಿಸಲಿಲ್ಲವೆಂಬ ಕೋಪದಿಂದ ಆಕೆಯ ಎಡಗೈಯನ್ನು ಕತ್ತರಿಸಿದ್ದಾನೆ. ಈ ಘಟನೆಯಲ್ಲಿ ಬಾಲಕಿಯ ಎಡಗೈ ಮಣಿಕಟ್ಟಿನವರೆಗೂ ಸಂಪೂರ್ಣ ರಸ್ತೆಯಲ್ಲಿ ಬಿದ್ದಿದೆ. [ಇದನ್ನೂ ಓದಿ: ಸಚಿವಾಲಯಗಳ ಸಾಮಾಜಿಕ ತಾಣ ಖಾತೆಗಳ ನಿರ್ವಹಣೆಗೆ ಕೋಟ್ಯಂತರ ರೂಪಾಯಿ ವೆಚ್ಚ]

ಆಕೆಯ ಕೈಯಿಂದ ರಕ್ತ ಧಾರಾಕಾರವಾಗಿ ರಕ್ತ ಹರಿಯುತಿದ್ದರೆ, ಪ್ರೇಯಸಿ ರಕ್ತ ಕಂಡ ಕೈ ಕತ್ತರಿಸಿದ ವಿನೋದ್ ಚೌರಾಸಿಯಾ ಕೂಡಾ ಅಲ್ಲಿಯೇ ಕುಸಿದು ಬಿದ್ದಿದ್ದಾನೆ. ಕೂಡಲೇ ಸ್ಥಳೀಯರು ಆ ಬಾಲಕಿಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಹೆಚ್ಚಾಗಿ ರಕ್ತ ಹೋಗಿದ್ದರಿಂದ ಆಕೆಯ ಪರಿಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ತುರ್ತು ಚಿಕಿತ್ಸೆಗಾಗಿ ಆಕೆಯನ್ನು ಲಕ್ನೋದ ಆಸ್ಪತ್ರೆಗೆ ಸಾಗಿಸುತ್ತಿರುವುದಾಗಿ ಹೇಳಿದರು. ದಾಳಿ ನಡೆಸಿದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Loading...
loading...
error: Content is protected !!