ಭಾರತದಲ್ಲಿ ನಿಜವಾದ ಬಾಹುಬಲಿ ಈತನೇ… – News Mirchi

ಭಾರತದಲ್ಲಿ ನಿಜವಾದ ಬಾಹುಬಲಿ ಈತನೇ…

ಬಾಹುಬಲಿ ಸಿನಿಮಾ ವಿಶ್ವಾದ್ಯಂತ ಭರ್ಜರಿ ಪ್ರದರ್ಶನದಿಂದ ಎಷ್ಟು ಹೆಸರುವಾಸಿಯಾಯಿತೋ ನಮಗೆಲ್ಲಾ ತಿಳಿದದ್ದೇ. ಆದರೆ ಇಲ್ಲೊಬ್ಬ ರಿಯಲ್ ಬಾಹುಬಲಿ ಹುಟ್ಟಿಕೊಂಡಿದ್ದು, ವಿಶ್ವಮಟ್ಟದಲ್ಲಿ ಭಾರತದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ವರ್ಲ್ಡ್ ರೆಸ್ಲಿಂಗ್ ಎಂಟರ್ಟೇನ್ಮೆಂಟ್ ನಲ್ಲಿ ನಮ್ಮ ದೇಶದ ರೆಸ್ಲರ್ ಜಿಂದರ್ ಮಹಾಲ್ ವರ್ಲ್ಡ್ ಹೆವೀ ವೇಟ್ ಚಾಂಪಿಯನ್ಷಿಪ್ ಗೆದ್ದು ಎಲ್ಲರನ್ನೂ ಆಶ್ಚರ್ಯಗೊಳಿಸಿದ್ದಾರೆ. ಬ್ಯಾಕ್ ಲಾಷ್ ಇವೆಂಟ್ ನ ಟೈಟಲ್ ಫೈಟ್ ನಲ್ಲಿ ಪ್ರಸಿದ್ಧ ರೆಸ್ಲರ್ ರ್ಯಾಂಡಿ ಆರ್ಟನ್ ವಿರುದ್ಧ ಜಿಂದರ್ ಜಯಗಳಿಸಿದ್ದಾರೆ.

2007 ರಲ್ಲಿ ದ ಗ್ರೇಟ್ ಖಲಿ ನಂತರ ಈ ಚಾಂಪಿಯನ್ಷಿಪ್ ಗೆದ್ದ ಭಾರತೀಯನಾಗಿದ್ದಾರೆ ಜಿಂದರ್. “ಡಬ್ಲ್ಯೂ ಡಬ್ಲ್ಯೂ ಇ” ನಲ್ಲಿ ಜಿಂದರ್ 50 ನೇ ಚಾಂಪಿಯನ್. ಆತನ ಗೆಲುವಿನಿಂದಾಗಿ ಇಂಡಿಯನ್ ಕಮೆಂಟೇಟರ್ಸ್ ಸಂಭ್ರಮ ಹೇಳತೀರದು. ಇಂಡಿಯಾ ನಂಬರ್ ಒನ್ ಎಂದು ಕೇಕೆ ಹಾಕಿ ಸಂಭ್ರಮಿಸಿದರು. ಕೆನಡಾದಲ್ಲಿರುವ ಜಿಂದರ್, ಡಬ್ಲ್ಯೂ ಡಬ್ಲ್ಯೂ ಇ ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಗೆಲುವಿನಿಂದ ಮಹಾರಾಜ ಯುಗ ಆರಂಭವಾಗಿದೆ ಎಂದು ಗೆದ್ದ ನಂತರ ಜಿಂದರ್ ಹೇಳಿದ್ದಾರೆ. ಈ ಗೆಲುವಿನಿಂದ ಭಾರತದಲ್ಲಿ ನಿಜವಾದ ಬಾಹುಬಲಿ ಹುಟ್ಟಿಕೊಂಡಿದ್ದಾನೆ ಎಂದು ಎಲ್ಲರೂ ಹೇಳುತ್ತಿದ್ದಾರೆ.

Contact for any Electrical Works across Bengaluru

Loading...
error: Content is protected !!