ಮುಂಬೈನಲ್ಲಿನ ಜಿನ್ನಾ ಮನೆ ನಮಗೆ ಸೇರಿದ್ದು, ನಮ್ಮ ವಶಕ್ಕೆ ನೀಡಿ: ಪಾಕಿಸ್ತಾನ |News Mirchi

ಮುಂಬೈನಲ್ಲಿನ ಜಿನ್ನಾ ಮನೆ ನಮಗೆ ಸೇರಿದ್ದು, ನಮ್ಮ ವಶಕ್ಕೆ ನೀಡಿ: ಪಾಕಿಸ್ತಾನ

ನವದೆಹಲಿ: ಮುಂಬೈನಲ್ಲಿರುವ ತಮ್ಮ ದೇಶದ ರಾಷ್ಟ್ರಪಿತ ಮಹಮದ್ ಅಲೀ ಜಿನ್ನಾ ಮನೆಯ ಮೇಲಿನ ಮಾಲೀಕತ್ವದ ಹಕ್ಕನ್ನು ಪಾಕ್ ಸರ್ಕಾರಕ್ಕೆ ವರ್ಗಾಯಿಸಬೇಕು ಎಂದು ಪಾಕಿಸ್ತಾನ ಭಾರತಕ್ಕೆ ಮನವಿ ಮಾಡಿದೆ. ನಮ್ಮ ಮನವಿಯನ್ನು ಭಾರತ ಸರ್ಕಾರ ಗೌರವಿಸಿ ನಮಗೆ ಮನೆಯನ್ನು ಒಪ್ಪಿಸುತ್ತದೆ ಎಂಬ ವಿಶ್ವಸಸವಿದೆ ಎಂದು ಪಾಕ್ ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರ ನಫೀಸ್ ಜಕಾರಿಯಾ ಹೇಳಿದ್ದಾರೆ.

ಮುಂಬೈನಲ್ಲಿರುವ ಜಿನ್ನಾ ಮನೆ ಪಾಕಿಸ್ತಾನದ ಆಸ್ತಿಯಾಗಿದ್ದು, ಹಲವು ಸಂದರ್ಭಗಳಲ್ಲಿ ಪಾಕಿಸ್ತಾನದ ವಶಕ್ಕೆ ಜಿನ್ನಾ ಮನೆಯನ್ನು ನೀಡುತ್ತೇವೆ ಎಂದು ಭಾರತ ಭರವಸೆ ನೀಡಿದ್ದು, ಇಲ್ಲಿಯವರೆಗೂ ಮಾತು ಉಳಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.

ದಕ್ಷಿಣ ಮುಂಬೈನಲ್ಲಿರುವ ಜಿನ್ನಾ ಪ್ಯಾಲೇಸ್ ನೆಲಸಮ ಮಾಡಿ ಆ ಜಾಗದಲ್ಲಿ ಸಾಂಸ್ಕೃತಿಕ ಕೇಂದ್ರವನ್ನು ನಿರ್ಮಾಣ ಮಾಡಬೇಕು ಎಂದು ಇತ್ತೀಚೆಗೆ ಬಿಜೆಪಿ ಶಾಸಕ ಪ್ರಭಾತ್ ಲೋಧಾ ವಿಧಾನಸಭೆಯಲ್ಲಿ ಒತ್ತಾಯಿಸಿದ್ದರು. ಕೇಂದ್ರ ಸರ್ಕಾರ ಎನಿಮಿ ಪ್ರಾಪರ್ಟಿ ಕಾಯ್ದೆಯನ್ನು ತಂದಿರುವ ಹಿನ್ನೆಲೆಯಲ್ಲಿ ಈ ಕಟ್ಟಡ ಸರ್ಕಾರದ ಆಸ್ತಿಯಾಗುತ್ತದೆ. ಈ ಕಟ್ಟಡದ ನಿರ್ವಹಣೆಗೆ ಲಕ್ಷಾಂತರ ರೂಪಾಯಿಗಳನ್ನು ವೆಚ್ಚ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದರು.

Loading...
loading...
error: Content is protected !!