ಹೊಸ ಆಫರ್ ನೊಂದಿಗೆ ಮುಂದೆ ಬಂದ ಜಿಯೋ |News Mirchi

ಹೊಸ ಆಫರ್ ನೊಂದಿಗೆ ಮುಂದೆ ಬಂದ ಜಿಯೋ

ರಿಲಯನ್ಸ್ ಜಿಯೋ ಕಡಿಮೆ ಬೆಲೆಯಲ್ಲಿ ಭರ್ಜರಿ ಕೊಡುಗೆಗಳನ್ನು ನೀಡುವುದರಿಂದ ಹಿಂದೆ ಸರಿದಿಲ್ಲ. ಮೂರು ತಿಂಗಳ ಸಮ್ಮರ್ ಸರ್ಪ್ರೈಸ್ ಕೊಡುಗೆ ಹಿಂತೆಗೆದುಕೊಳ್ಳುವಂತೆ ಟ್ರಾಯ್ ಆದೇಶಿಸಿದ ಬೆನ್ನಲ್ಲೇ, ಜಿಯೋ ತನ್ನ ಪ್ರೈಮ್ ಮತ್ತು ನಾನ್ ಪ್ರೈಮ್ ಸದಸ್ಯರಿಗೆ ಹೊಸ ಕೊಡುಗೆಯಿಂದ ಮತ್ತಷ್ಟು ಹತ್ತಿರವಾಗಲು ಮುಂದೆ ಬಂದಿದೆ.

ಧನ್ ಧನಾ ಧನ್ ಹೆಸರಿನ ಮೂಲಕ ಪ್ರತಿದಿನ 1 ಜಿಬಿ ಮತ್ತು 2 ಜಿಬಿ ಡಾಟಾ ನೀಡುವ 84 ದಿನಗಳ ಪ್ಯಾಕ್ ನೊಂದಿಗೆ ಮುಂದೆ ಬಂದಿದೆ. ಇದರ ಪ್ರಕಾರ ರೂ. 99 ಪಾವತಿಸಿ ಪ್ರೈಮ್ ಸದಸ್ಯರಾದವರು ರೂ.309 ಪಾವತಿಸಿದರೆ 84 ದಿನಗಳ ಕಾಲ ಪ್ರತಿ ದಿನ 1 ಜಿಬಿ ಡಾಟಾ ಪಡೆಯಲಿದ್ದಾರೆ. ಪ್ರೈಮ್ ಸದಸ್ಯರಲ್ಲದವರು ರೂ. 408 ಪಾವತಿಸಿ ಈ ಕೊಡುಗೆಯನ್ನು ಆಸ್ವಾಧಿಸಬಹುದು.

  • No items.

ಇನ್ನು 509 ರೂಪಾಯಿ ರೀಚಾರ್ಜ್ ಮಾಡಿಕೊಂಡರೆ ಪ್ರತಿ ದಿನ 2 ಜಿಬಿ ಯಂತೆ 84 ದಿನಗಳು ಪಡೆಯಬಹುದು. ಪ್ರೈಮ್ ಸದಸ್ಯರಲ್ಲದವರು ರೂ.608 ರೀಚಾರ್ಜ್ ಮಾಡಿ ಈ ಸೌಲಭ್ಯ ಪಡೆಯಬಹುದು. ಈ ಎರಡೂ ಪ್ಯಾಕ್ ಗಳು ಅನಿಯಮಿತ ಎಸ್.ಎಂ.ಎಸ್ ಮತ್ತು ವಾಯ್ಸ್ ಕಾಲ್ಸ್ ಹೊಂದಿವೆ.

ಜಿಯೋ ತನ್ನ ಹಿಂದಿನ ಸಮ್ಮರ್ ಸರ್ಪ್ರೈಸ್ ಕೊಡುಗೆಯಂತೆಯೇ ಈ ಹೊಸ ಕೊಡುಗೆಯನ್ನೂ ನೀಡುತ್ತಿದ್ದು, ಟ್ರಾಯ್ ನಿರ್ದೇಶನವನ್ನು ಕಡೆಗಣಿಸಿದೆ ಎಂದು ಏರ್ಟೆಲ್ ಆರೋಪಿಸುತ್ತಿದೆ.

Loading...
loading...
error: Content is protected !!