ಐಡಿಯಾ 70 ಜಿಬಿ ಡಾಟಾ ಆಫರ್… – News Mirchi

ಐಡಿಯಾ 70 ಜಿಬಿ ಡಾಟಾ ಆಫರ್…

ಐಡಿಯಾ ಒಂದು ಬಂಪರ್ ಆಫರ್ ಒಂದು ಹೊರತಂದಿದೆ. ರಿಲಿಯನ್ಸ್ ಜಿಯೋ ಪರಿಣಾಮ ಟೆಲಿಕಾಂ ಕ್ಷೇತ್ರದಲ್ಲಿ ತೀವ್ರ ಸ್ಪರ್ಧೆ ಆರಂಭವಾಗಿರುವುದು ನಮಗೆಲ್ಲಾ ತಿಳಿದಿದೆ. ಈ ಹಿನ್ನೆಲೆಯಲ್ಲಿ ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳಲು ಟೆಲಿಕಾಂ ಕಂಪನಿಗಳು ನಾನಾ ಕೊಡುಗೆಗಳ ಮೂಲಕ ಪ್ರಯತ್ನಿಸುತ್ತಿವೆ. ಇದೀಗ ಐಡಿಯಾ ಸೆಲ್ಯುಲಾರ್ ನೆಟ್ವರ್ಕ್ ಹೊಸ ಕೊಡುಗೆಯನ್ನು ತಂದಿದೆ.

ಐಡಿಯಾ ಪ್ರೀಪೇಯ್ಡ್ ಗ್ರಾಹಕರಿಗೆ ರೂ. 396 ರ ರೀಚಾರ್ಜ್ ಪ್ಯಾಕ್ ಪರಿಚಯಿಸುತ್ತಿದೆ. ರೂ. 396 ರೀಚಾರ್ಜ್ ಮಾಡಿದರೆ ಗ್ರಾಹಕರಿಗೆ 70 ಜಿಬಿ ಡಾಟಾ ಲಭಿಸುತ್ತದೆ. ಈ ಡಾಟಾವನ್ನು 70 ದಿನಗಳ ಕಾಲ ಬಳಸಿಕೊಳ್ಳಬಹುದು. ಡಾಟಾ ಜೊತೆಗೆ 3,000 ನಿಮಿಷಗಳ ಲೋಕಲ್ ಮತ್ತು ಎಸ್.ಟಿ.ಡಿ ಕರೆಗಳನ್ನು ಮಾಡುವ ಅವಕಾಶವೂ ಇದೆ.

ಈ ರೀಚಾರ್ಜ್ ನಿಂದ ಐಡಿಯಾ ನೆಟ್ವರ್ಕ್ ಮತ್ತು ಯಾವುದೇ ಇತರೆ ನೆಟ್ವರ್ಕ್ ಗಳಿಗೆ ಉಚಿತ ಕರೆ ಮಾಡಬಹುದಾಗಿದೆ. ಆದರೆ ಒಂದ ದಿನದಲ್ಲಿ 300 ನಿಮಿಷಗಳು, ವಾರಕ್ಕೆ 1,200 ನಿಮಿಷಗಳು ಮಾತ್ರ ಬಳಸಿಕೊಳ್ಳಬಹುದು. ಮಿತಿ ಮೀರಿದ ಕರೆಗಳಿಗೆ ನಿಮಿಷಕ್ಕೆ 30 ಪೈಸೆ ವಸೂಲು ಮಾಡುತ್ತಾರೆ. ಪ್ರತಿ ದಿನ 1 ಜಿಬಿ(70 ದಿನಗಳಲ್ಲಿ 70 ಜಿಬಿ) ಡಾಟಾ ಈ ಪ್ಯಾಕ್ ನ ಮೂಲಕ ಪಡೆಯಬಹುದಾಗಿದೆ.

Loading...