ಜಿಯೋ ಪ್ರೈಮ್ ಗಡುವು ವಿಸ್ತರಣೆ, ಘೋಷಣೆಯಾಯಿತು ಹೊಸ ಕೊಡುಗೆ

ಇನ್ನೂ ಹೆಚ್ಚು ಗ್ರಾಹಕರು ಜಿಯೋ ಪ್ರೈಮ್ ಸದಸ್ಯರಾಗಲು ಅನುಕೂಲವಾಗುವಂತೆ ಪ್ರೈಮ್ ಸದಸ್ಯರಾಗಲು ಈ ಹಿಂದೆ ನೀಡಿದ್ದ ಗಡುವನ್ನು ಇನ್ನೂ 15 ದಿನಗಳ(ಏಪ್ರಿಲ್ 15) ಕಾಲ ರಿಲಯನ್ಸ್ ವಿಸ್ತರಿಸಿದೆ. ಮಾರ್ಚ್ 31 ರೊಳಗೆ ಯಾರು ರೂ.99 ಪಾವತಿಸಿ ಪ್ರೈಮ್ ಸದಸ್ಯರಾಗಿಲ್ಲವೋ ಅಂತಹವರು ಏಪ್ರಿಲ್ 15 ರೊಳಗೆ ರೂ.99 ಪಾವತಿ ಮಾಡುವ ಮೂಲಕ‌ ಪ್ರೈಮ್ ಸದಸ್ಯರಾಗಿ ರಿಜಿಸ್ಟರ್ ಮಾಡಿಕೊಳ್ಳಬಹುದು.

ಇದೇ ವೇಳೆ “ಜಿಯೋ ಸಮ್ಮರ್ ಸರ್ಪ್ರೈಸ್” ಕೊಡುಗೆಯನ್ನು ಜಿಯೋ ಘೋಷಿಸಿದ್ದು, ಏಪ್ರಿಲ್ 15 ರ ಒಳಗೆ ಪ್ರೈಮ್ ಸದಸ್ಯರು ರೂ.303 ಪಾವತಿಸಿದರೆ ಇನ್ನೂ ಮೂರು ತಿಂಗಳ ಕಾಲ ಉಚಿತ ಸೇವೆಗಳನ್ನು ಪಡೆಯಬಹುದು. ಪ್ರೈಮ್ ಸದಸ್ಯರಾಗದವರು ರೂ.99 ಪಾವತಿಸಿ ಪ್ರೈಮ್ ಸದಸ್ಯರಾಗುವುದರ ಜೊತೆ ರೂ.303 ಮತ್ತು ಅದಕ್ಕಿಂತ ಹೆಚ್ಚಿನ ರೀಚಾರ್ಜ್ ಮಾಡುವುದರ ಮೂಲಕ ಈ ಕೊಡುಗೆಯನ್ನು ಸವಿಯಬಹುದು.

ಕಳೆದ ಒಂದು ತಿಂಗಳಲ್ಲಿ 72 ಮಿಲಿಯನ್ ಗೂ ಹೆಚ್ಚು ಜನ ಜಿಯೋ ಪ್ರೈಮ್ ಗೆ ಬದಲಾಗಿದ್ದಾರೆ ಎಂದು ಕಂಪನಿ ಹೇಳಿದೆ. ಜಿಯೋ ಮನಿ ವ್ಯಾಲೆಟ್ ಮೂಲಕ ಮಾಡುವ ಪ್ರತಿ ರೀಚಾರ್ಜ್ ಮೇಲೂ ಗ್ರಾಹಕರು ರೂ. 50 ಕ್ಯಾಷ್ ಬ್ಯಾಕ್ ಪಡೆಯಬಹುದು.

Loading...

Leave a Reply

Your email address will not be published.

error: Content is protected !!