2ಜಿ ಮೊಬೈಲ್ ಬಳಕೆದಾರರತ್ತ ಜಿಯೋ ಕಣ್ಣು, ರೂ.500ಕ್ಕೇ 4ಜಿ ಫೋನ್!

ಮುಂಬೈ: ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದ ರಿಲಯನ್ಸ್, ತನ್ನ ಗ್ರಾಹಕರಿಗೆ ಉಚಿತ ಕೊಡುಗೆಗಳಿಂದ ಇತರೆ ಟೆಲಿಕಾಂ ಕಂಪನಿಗಳಿಗೆ ತಲೆನೋವಾಗಿ ಪರಿಣಮಿಸಿತ್ತು. ಇದೀಗ ಇದೀಗ 2ಜಿ ಮೊಬೈಲ್ ಬಳಕೆದಾರರ ಮೇಲೆ ಜಿಯೋ ತನ್ನ ದೃಷ್ಟಿ ಹಾಯಿಸಿದೆ. ಫೀಚರ್ ಫೋನ್ ಗಳಿಗೂ ತನ್ನ ಸೇವೆಗಳನ್ನು ನೀಡಲು ಮುಂದಾಗುತ್ತಿದೆ. ಅಷ್ಟೇ ಅಲ್ಲ ಅತಿ ಕಡಿಮೆ ದರಕ್ಕೇ ಈ ಫೀಚರ್ ಫೋನ್ ಬಿಡುಗಡೆ ಮಾಡಲಿದೆಯಂತೆ. ಈ 4ಜಿ ಫೀಚರ್ ಫೋನ್ ಕೇವಲ ರೂ.500 ಕ್ಕೆ ನೀಡಲಿದೆ ಎನ್ನಲಾಗುತ್ತಿದ್ದು, ಇದು ಟೆಲಿಕಾಂ ಮಾರುಕಟ್ಟೆಯಲ್ಲಿ ಮತ್ತೊಂದು ಸಂಚಲನಕ್ಕೆ ಕಾರಣವಾಗಲಿದೆ.

ಇದಕ್ಕೂ ಮೊದಲು ಈ ಜಿಯೋ 4ಜಿ ಫೀಚರ್ ಫೋನ್ ದರ ರೂ.1500 ಇರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಇದೀಗ ರೂ.500 ಕ್ಕೆ 4ಜಿ ವೋಲ್ಟ್ ಸಪೋರ್ಟ್ ನೊಂದಿಗೆ ರಿಲಿಯನ್ಸ್ ಜಿಯೋ 4ಜಿ ಫೀಚರ್ ಫೋನ್ ನೀಡಲಿದೆ ಎಂದು ಹೇಳುತ್ತಿದ್ದಾರೆ. ಇದೇ ಜುಲೈ 21 ರಂದು ರಿಲಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ಅಧಿವೇಶನದಲ್ಲಿ ಈ ಫೀಚರ್ ಫೋನ್ ಕುರಿತು ಪ್ರಕಟಣೆ ಹೊರಬೀಳಲಿದ್ದು, ಸ್ವಾತಂತ್ರ್ಯ ದಿನಾಚರಣೆ (ಆಗಸ್ಟ್ 15) ಯಂದು ಮಾರುಕಟ್ಟೆಗೆ ಬಿಡುಗಡೆಯಾವುದ ಸಾಧ್ಯತೆ ಇದೆ. ಇದಕ್ಕಾಗಿ ಈಗಾಗಲೇ 2 ಕೋಟಿ ಹ್ಯಾಂಡ್ ಸೆಟ್ ಗಳಿಗೆ ಆರ್ಡರ್ ಕೂಡಾ ಮಾಡಲಾಗಿದೆ ಎಂದು ಹೇಳಲಾಗಿದೆ.

ಇದರ ಜೊತೆಗೆ ಶೀಘ್ರದಲ್ಲಿಯೇ ಕೊನೆಯಾಗಲಿರುವ ಧನ್ ಧನಾ ಧನ್ ಕೊಡುಗೆಗೆ ಸಮನಾಗಿ ಮತ್ತೊಂದು ಹೊಸ ಟಾರಿಫ್ ಪ್ಲಾನ್ ಜಿಯೋ ಗ್ರಾಹಕರ ಮುಂದೆ ಬರಲಿದೆಯಂತೆ.