ಜಿಯೋ ಫೈಬರ್ ಬ್ರಾಡ್ ಬ್ಯಾಂಡ್, ತಿಂಗಳಿಗೆ 100 ಜಿಬಿ, 3 ತಿಂಗಳು ಉಚಿತ?

ರಿಲಯನ್ಸ್ ಜಿಯೋ ತನ್ನ ಫೈಬರ್ ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಸೇವೆಗಳನ್ನು ಪ್ರಾಯೋಗಿಕವಾಗಿ ಪರೀಕ್ಷಿಸುತ್ತಿರುವ ವಿಷಯ ತಿಳಿದದ್ದೇ. ದೆಹಲಿ, ಮುಂಬಯಿ, ಅಹಮದಾಬಾದ್, ಜಾಮ್ ನಗರ್, ಸೂರತ್ ಮತ್ತು ವಡೋದರಗಳಲ್ಲಿ ಈಗಾಗಲೇ ಜಿಯೋ ಫೈಬರ್ ಬ್ರಾಡ್ ಬ್ಯಾಂಡ್ ಟ್ರಯಲ್ಸ್ ಮುಂದುವರೆಯುತ್ತಿವೆ.

ಇದೀಗ ಹೊಸ ಸುದ್ದಿ ಏನೆಂದರೆ ಜುಲೈ 21 ರಂದು ನಡೆಯಲಿರುವ ರಿಲಯನ್ಸ್ ವಾರ್ಷಿಕ ಸಭೆಯಲ್ಲಿ ಜಿಯೋ ಫೈಬರ್ ಬ್ರಾಡ್ ಬ್ಯಾಂಡ್ ಅನ್ನು ಅಧಿಕೃತವಾಗಿ ಘೋಷಿಸಲಿದ್ದಾರೆ ಎಂದು ತಿಳಿದು ಬಂದಿದೆ. ಬೆಂಗಳೂರಿನಲ್ಲಿ ಕೇಬಲ್ ಅಳವಡಿಕೆ ಕಾರ್ಯವೂ ನಡೆಯುತ್ತಿರುವುದು ಕಂಡು ಬಂದಿದೆ.

ಒಂದೇ ದಿನದಲ್ಲಿ 1 ಲಕ್ಷ ಮೊಬೈಲ್ ಮಾರಾಟ… ಯಾವುದಿದು?

ಇದೇ ತಿಂಗಳ 21 ರಂದು ನಡೆಯಲಿರುವ ಸಭೆಯಲ್ಲಿ ರೂ.500 ಕ್ಕೆ 4ಜಿ ಫೀಚರ್ ಫೋನ್ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಈಗಾಗಲೇ ಸುದ್ದಿಗಳಿವೆ. ಅದೇ ದಿನ ಜಿಯೋ ತನ್ನ ಫೈಬರ್ ಬ್ರಾಡ್ ಬ್ಯಾಂಡ್ ಸೇವೆಗಳನ್ನು ಕೂಡಾ ಅಧಿಕೃತವಾಗಿ ಪ್ರಕಟಿಸಲಿದೆ ಎನ್ನಲಾಗಿದೆ. ಮತ್ತೊಂದೆಡೆ ಜಿಯೋ ಫೈಬರ್ ಬ್ರಾಡ್ ಬ್ಯಾಂಡ್ ಗೆ ಸಂಬಂಧಿಸಿದಂತೆ ಆಫರ್ ಪ್ಲಾನ್ ವಿವರಗಳೂ ಲೀಕ್ ಆಗಿವೆ.

ಸಿಕ್ಕ ಮಾಹಿತಿಗಳ ಪ್ರಕಾರ ಮೊದಲ 3 ತಿಂಗಳು ಫೈಬರ್ ಬ್ರಾಂಡ್ ಬ್ಯಾಂಡ್ ಸೇವೆ ಉಚಿತವಾಗಿ ಸಿಗಲಿದೆ. ತಿಂಗಳಿಗೆ 100 ಜಿಬಿ ಯಂತೆ ಗ್ರಾಹಕರು ಬಳಸಿಕೊಳ್ಳಬಹುದು. ಡಾಟಾ ಲಿಮಿಟ್ ಮುಗಿದರೆ ಇಂಟರ್ನೆಟ್ ವೇಗ 1 ಎಂಬಿಪಿಎಸ್ ಗೆ ಕುಸಿಯುತ್ತದೆ. ಇದಕ್ಕಾಗಿ 4,500 ರೂಪಾಯಿಗಳನ್ನು ಭದ್ರತಾ ಠೇವಣಿಯಾಗಿ ಜಿಯೋ ವಸೂಲಿ ಮಾಡಬಹುದು ಎನ್ನಲಾಗುತ್ತಿದೆ. ಇದರ ಬಗ್ಗೆ ಮತ್ತಷ್ಟು ಸ್ಪಷ್ಟ ಮಾಹಿತಿ ತಿಳಿಯಬೇಕೆಂದರೆ ಜುಲೈ 21 ರವರೆಗೆ ಕಾಯಲೇಬೇಕು.

ವಿಗ್ರಹ ಮರು ಪ್ರತಿಷ್ಠಾಪನೆ ಸಮಯದಲ್ಲಿ ದೇಗುಲದಲ್ಲಿ ಸಿಕ್ಕ ರಹಸ್ಯ ಕೋಣೆ!