ಬೇಸಿಕ್ ಮೊಬೈಲಿಗೂ ವಿಸ್ತರಿಸಲಿದೆ ಜಿಯೋ

ಟೆಲಿಕಾಂ ಕ್ಷೇತ್ರದಲ್ಲಿ ಮತ್ತೊಂದು ಸಂಚಲನ ಸೃಷ್ಟಿಸಲು ರಿಲಯನ್ಸ್ ಜಿಯೋ ಸಿದ್ದವಾಗಿದೆ. ಲೈಫ್ ಬ್ರಾಂಡ್ ಹೆಸರಲ್ಲಿ 4ಜಿ ವಾಯ್ಸ್ ಓವರ್ ಎಲ್ಟಿಇ ಸ್ಮಾರ್ಟ್ ಪೋನ್ ಮೂಲಕ ಅನಿಯಮಿತ ಉಚಿತ ಡಾಟಾ ಕಾಲ್ ನೀಡಿದ ಕಂಪನಿ, ಈಗ ಬೇಸಿಕ್ ಮೊಬೈಲ್ ಕಡೆ ಗಮನಹರಿಸಿದೆ.

ಸದ್ಯ 4ಜಿ ಸ್ಮಾರ್ಟ್ ಫೋನ್ ಬಳಕೆದಾರರೇ ಜಿಯೋ ವೆಲ್ಕಮ್ ಆಫರ್ ಆಫರ್ ನ ಪ್ರಯೋಜನ ಪಡೆಯುತ್ತಿದ್ದಾರೆ. ಸ್ಮಾರ್ಟ್ ಫೋನ್‌ಗಳನ್ನು ಖರೀದಿಸಲಾರದವರ ಈ ಕೊಡುಗೆಯಿಂದ ದೂರವಿದ್ದಾರೆ. ಹೀಗಾಗಿ ರೂ. 1000 – 1500 ರೊಳಗಿನ ಬೇಸಿಕ್ ಮೊಬೈಲ್‌ಗಳಲ್ಲಿಯೂ ವಾಯ್ಸ್ ಓವರ್ ಎಲ್ಟಿಇ (ವಿಒಎಲ್‌ಟಿಇ) ಸೌಲಭ್ಯವಿರುವಂತೆ ತಂದರೆ ಎಲ್ಲಾ ವರ್ಗಗಳಿಗೂ ಹತ್ತಿರವಾಗಬಹುದು ಎಂದು ಜಿಯೋ ಭಾವಿಸುತ್ತಿದೆ. ಇದಕ್ಕಾಗಿ ಹಲವು ಮೊಬೈಲ್ ತಯಾರಿಕಾ ಕಂಪನಿಗಳ ಜೊತೆ ಚರ್ಚೆ ನಡೆಸುತ್ತಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ ನವೆಂಬರ್ ನಲ್ಲೇ ಇವು ಮಾರುಲಟ್ಟೆಗೆ ಬರುವ ಸಾಧ್ಯತೆ ಇದೆ.

ವಾಯ್ಸ್ ಓವರ್ ಆಧಾರಿತ ಫೀಚರ್ ಫೋನ್‌ಗಳನ್ನು ಆದಷ್ಟು ಬೇಗ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತೇವೆ ಎಂದು ಜಿಯೋ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಸೌಲಭ್ಯದ ಮೊಬೈಲ್‌ಗಳನ್ನು ಪರಿಶೀಲಿಸುತ್ತಿರುವುದಾಗಿ ಕಾರ್ಬನ್ ಮೊಬೈಲ್ಸ್ ಛೇರ್ಮನ್ ಸುಧೀರ್ ಪ್ರಕಟಿಸಿದ್ದಾರೆ. ಕಾರ್ಬನ್ ಬ್ರಾಂಡ್ ಅಡಿಯಲ್ಲಿಯೇ ಇವುಗಳನ್ನು ಬಿಡುಗಡೆ ಮಾಡುತ್ತೇವೆ, ಜಿಯೋ ಬಯಸಿದರೆ ಲೈಫ್ ಬ್ರಾಂಡ್‌ಗೂ ಸರಬರಾಜು ಮಾಡುವುದಾಗಿ ಹೇಳಿದರು.