ಜಿಯೋ ಹೊಸ ವರ್ಷದ ಆಫರ್ ರೂ.199 ಮತ್ತು ಏರ್ಟೆಲ್ ವೊಡಾಫೋನ್ ಕೊಡುಗೆಗಳು |News Mirchi

ಜಿಯೋ ಹೊಸ ವರ್ಷದ ಆಫರ್ ರೂ.199 ಮತ್ತು ಏರ್ಟೆಲ್ ವೊಡಾಫೋನ್ ಕೊಡುಗೆಗಳು

ರಿಲಯನ್ಸ್ ತನ್ನ ಪ್ರೀಪೇಯ್ಡ್ ಗ್ರಾಹಕರಿಗಾಗಿ ಪರಿಚಯಿಸುತ್ತಿರುವ ‘ಹ್ಯಾಪಿ ನ್ಯೂ ಇಯರ್ 2018’ ಪ್ಲಾನ್ ಪ್ರಮುಖ ಟೆಲಿಕಾಂ ಆಪರೇಟರ್ ಗಳ ನಡುವಿನ ಸ್ಪರ್ಧೆಯನ್ನು ತೀವ್ರಗೊಳಿಸಿದೆ. ಜಿಯೋ ಹೊಸ ವರ್ಷದ ಪ್ಲಾನ್ ಗೆ ಪ್ರತಿಯಾಗಿ ಏರ್ಟೆಲ್, ವೊಡಾಫೋನ್ ಮುಂತಾದ ಟೆಲಿಕಾಂ ಕಂಪನಿಗಳೂ ಕೂಡಾ ಇದೇ ರೀತಿಯ ಪ್ಲಾನ್ ಗಳನ್ನು ಘೋಷಿಸಿವೆ.

ಇನ್ನು ಮುಸ್ಲಿಂ ಮಹಿಳೆಯರ ಹಜ್ ಪ್ರವಾಸಕ್ಕೆ ಪುರುಷರ ಸಾಥ್ ಬೇಕಿಲ್ಲ : ಮೋದಿ

ಜಿಯೋ ರೂ.199 ಮತ್ತು 299 ರ ಪ್ಯಾಕ್ ಗಳನ್ನು ಹೊಸ ವರ್ಷದ ಪ್ಲಾನ್ ಅಡಿಯಲ್ಲಿ ಘೋಷಿಸಿದೆ. ರೂ.199 ರ ಪ್ಯಾಕ್ ರೀಚಾರ್ಜ್ ಮಾಡಿಸಿಕೊಂಡವರಿಗೆ ಪ್ರತಿದಿನ 1.2 ಜಿಬಿ ಡೇಟಾವನ್ನು ನೀಡುತ್ತದೆ. ಏರ್ಟೆಲ್ ಕೂಡಾ ರೂ.199 ರ ಪ್ಯಾಕ್ ಘೋಷಿಸಿದ್ದು, ಇದರ ಮೂಲಕ ಪ್ರತಿ ದಿನ 1 ಜಿಬಿ ಡೇಟಾ ಗ್ರಾಹಕರಿಗೆ ಸಿಗುತ್ತದೆ. ಇನ್ನು ವೊಡಾಫೋನ್ ನ ರೂ.198 ರ ಪ್ಯಾಕ್ ನಲ್ಲಿ ಪ್ರತಿ ದಿನ 1 ಜಿಬಿ ಡೇಟಾವನ್ನು ಪಡೆಯಬಹುದು ಇವೆಲ್ಲವುಗಳ ವ್ಯಾಲಿಡಿಟಿ 28 ದಿನಗಳು.

ಜಿಯೋ ರೂ.199 ಪ್ಯಾಕ್ ಪ್ರತಿದಿನ 1.2 ಜಿಬಿ 4ಜಿ ಡೇಟಾ ಹೊಂದಿದ್ದು, ದೇಶಾದ್ಯಂತ ಅನಿಯಮಿತ ಉಚಿತ ಸ್ಥಳೀಯ, ಎಸ್ಟಿಡಿ ಮತ್ತು ರೋಮಿಂಗ್ ಕರೆಗಳನ್ನು ನೀಡುತ್ತದೆ. ಜಿಯೋ ಗ್ರಾಹಕರು ಎಂದಿನಂತೆ ಎಲ್ಲಾ ಜಿಯೋ ಅಪ್ಲಿಕೇಷನ್ ಗಳನ್ನು ಆನಂದಿಸಬಹುದಾಗಿದ್ದು, ಉಚಿತ ಅನಿಯಮಿತ ಎಸ್ಎಂಎಸ್ ಗಳನ್ನು 28 ದಿನಗಳವರೆಗೆ ಪಡೆಯಬಹುದು.

ಏರ್ಟೆಲ್ ನ ರೂ.199 ಪ್ಯಾಕ್ ಪ್ರತಿದಿನ 1ಜಿಬಿ 3ಜಿ/4ಜಿ ಡೇಟಾದೊಂದಿಗೆ ಅನಿಯಮಿತ ಸ್ಥಳೀಯ, ಎಸ್ಟಿಡಿ ಮತ್ತು ರೋಮಿಂಗ್ ಕರೆಗಳನ್ನು ನೀಡುತ್ತದೆ. ಈ ಪ್ಲಾನ್ ಆಯ್ದ ವಲಯಗಳಿಗೆ ಮಾತ್ರ ಸೀಮಿತವಾಗಿದೆ. ಪ್ರತಿದಿನ 100 ಎಸ್ಎಂಎಸ್ ಗಳನ್ನು ಈ ಪ್ಲಾನ್ ಹೊಂದಿದೆ. ಇದರ ವ್ಯಾಲಿಡಿಟಿ 28 ದಿನಗಳು.

ವೊಡಾಫೋನ್ ನ ರೂ.198 ಪ್ರೀಪೇಯ್ಡ್ ರೀಚಾರ್ಜ್ ಮೂಲಕ ಪ್ರತಿದಿನ 1ಜಿಬಿ 3ಜಿ/4ಜಿ ಡಾಟಾ ಪಡೆಯಬಹುದು. 28 ದಿನಗಳ ಕಾಲ ಅನಿಯಮಿತ ಸ್ಥಳೀಯ ಮತ್ತು ಎಸ್ಟಿಡಿ ವಾಯ್ಸ್ ಕರೆಗಳನ್ನು ಮಾಡಬಹುದಾಗಿದ್ದು, ಉಚಿತ ರೋಮಿಂಗ್ ಕರೆಗಳು ಲಭ್ಯವಿದೆ. ಇದರ ವ್ಯಾಲಿಡಿಟಿ 28 ದಿನಗಳು.

Get Latest updates on WhatsApp. Send ‘Subscribe’ to 8550851559

Loading...
loading...
error: Content is protected !!