ಪ್ರತಿದಿನ ಜಿಯೋ ಗ್ರಾಹಕರಿಗೆ 10 ಜಿಬಿ ಉಚಿತ ಡಾಟಾ ಸಂದೇಶ ಬಂತಾ? – News Mirchi
We are updating the website...

ಪ್ರತಿದಿನ ಜಿಯೋ ಗ್ರಾಹಕರಿಗೆ 10 ಜಿಬಿ ಉಚಿತ ಡಾಟಾ ಸಂದೇಶ ಬಂತಾ?

ಉಚಿತ ಕೊಡುಗೆಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿರುವ ರಿಲಯನ್ಸ್ ನಿಮ್ಮ ದಿನದ ಡೌನ್ ಲೋಡ್ ಮಿತಿಯನ್ನು ಹೆಚ್ಚಿಸುತ್ತಿದೆ, ಈ ಲಿಂಕ್ ಕ್ಲಿಂಕ್ ಮಾಡಿ ಅಪ್ ಗ್ರೇಡ್ ಮಾಡಿಕೊಳ್ಳಿ ಎಂದು ನಿಮಗೆ ಸಂದೇಶಗಳು ಬರುತ್ತಿವೆಯಾ? ಹಾಗಿದ್ದರೆ ಇಂತಹ ಮೆಸೇಜ್ ಬಗ್ಗೆ ಎಚ್ಚರಿಕೆಯಿಂದಿರಿ.

ಏಕೆಂದರೆ ರಿಲಯನ್ಸ್ ಡೌನ್ ಲೋಡ್ ಮಿತಿಯನ್ನು ಹೆಚ್ಚಿಸುತ್ತಿಲ್ಲವಂತೆ. ಇದು ಸೈಬರ್ ಕ್ರಿಮಿನಲ್ ಗಳ ಕೆಲಸ ಎನ್ನುತ್ತಿದ್ದಾರೆ. ರಿಲಯನ್ಸ್ ಜಿಯೋ ಹೆಸರಿನಲ್ಲಿ ಫೇಸ್ ಬುಕ್ ಹಾಗೂ ವಾಟ್ಸಾಪ್ ಗಳಲ್ಲಿ ಇಂತಹ ಸಂದೇಶಗಳನ್ನು ಕಳುಹಿಸುತ್ತಾ ಬಳಕೆದಾರರ ವೈಯುಕ್ತಿಕ ಮಾಹಿತಿಯನ್ನು ಕದಿಯುತ್ತಿದ್ದಾರೆ. ಅಷ್ಟೇ ಅಲ್ಲದೆ ಆ ಮೆಸೇಜನ್ನು 10 ಜನರಿಗೆ ಕಳುಹಿಸಿ ಎಂದು ಅವರನ್ನೂ ವಂಚಿಸುತ್ತಿದ್ದಾರೆ.

ದಿನನಿತ್ಯದ ಡೌನ್ ಲೋಡ್ ಮಿತಿ 1ಜಿಬಿಯಿಂದ 10 ಜಿಬಿಗೆ ಅಪ್‌ಗ್ರೇಡ್ ಆಗುತ್ತದೆ ಎಂಬ ಆಸೆಯಿಂದ ಇತ್ತೀಚೆಗೆ ಇಂತಹ ಮೆಸೇಜುಗಳನ್ನು ಕಳಿಹಿಸುವುದು ಸಾಮಾನ್ಯವಾಗಿಬಿಟ್ಟಿದೆ. ಈ ಲಿಂಕ್ ಕ್ಲಿಕ್ ಮಾಡಿದರೆ ಬಳಕೆದಾರರ ಮೊಬೈಲ್ ನಂಬರ್, ಇಮೇಲ್ ಅಡ್ರೆಸ್ ಸೇರಿದಂತೆ ಹಲವು ವಿವರಗಳು ಕೇಳುತ್ತದೆ. ಎಲ್ಲಾ ವಿವರ ನಮೂದಿಸಿದ ಮೇಲೆ, ಆ ಮೆಸೇಜನ್ನು ಹತ್ತು ಜನ ವಾಟ್ಸಾಪ್ ಗ್ರೂಪ್ ಅಥವಾ ಫೇಸ್ಬುಕ್ ಸ್ನೇಹಿತರಿಗೆ ಕಳುಹಿಸುವಂತೆ ಒತ್ತಡ ಹಾಕುತ್ತದೆ. ಅದು ಹೇಳಿದಂತೆ ನೀವು ಮಾಡಿದ್ದೀರಿ ಎಂದಾದರೆ ನಿಮ್ಮ ವೈಯುಕ್ತಿಕ ಮಾಹಿತಿ ಅವರ ಕೈಸೇರಿದಂತೆಯೇ.

The most recent trick doing the rounds via social media is to get everyday 10GB 4G data on your Reliance Jio connection. But be careful, its a hoax that conceivably puts your information at hazard. The trap includes going to an unsecured site upgrade-jio4g.ml where you are required to choose your state, enter your mobile number and email address, trailed by downloading an application in the second step.

Contact for any Electrical Works across Bengaluru

Loading...

Leave a Reply

Your email address will not be published.

error: Content is protected !!