ಬ್ರೇಕಿಂಗ್ ನ್ಯೂಸ್: ಜಿಯೋ ಫೀಚರ್ ಫೋನ್ ಉಚಿತ! – News Mirchi

ಬ್ರೇಕಿಂಗ್ ನ್ಯೂಸ್: ಜಿಯೋ ಫೀಚರ್ ಫೋನ್ ಉಚಿತ!

ರಿಲಯನ್ಸ್ ಜಿಯೋ ಫೀಚರ್ ಫೋನ್ ಕುರಿತು ಏನು ಪ್ರಕಟಣೆ ಹೊರಬೀಳುವುದೋ ಎಂದು ಕಾಯುತ್ತಿದ್ದವರಿಗೆ ಜಿಯೋ ಸಿಹಿ ಸುದ್ದಿಯೇ ನೀಡಿದೆ. ಜಿಯೋ ಫೀಚರ್ ಫೋನ್ ಅನ್ನು ಉಚಿತವಾಗಿ ನೀಡುತ್ತಿರುವುದಾಗಿ ಜಿಯೋ ಪ್ರಕಟಿಸಿದೆ.

ರಿಲಯನ್ಸ್ ಇಂಡಸ್ಟ್ರೀಸ್ ನ‌ 40 ನೇ ವಾರ್ಷಿಕ ಸಮಾವೇಶದಲ್ಲಿ ಮುಖೇಶ್ ಅಂಬಾನಿ ಈ ಘೋಷಣೆ ಮಾಡಿದ್ದಾರೆ. 4ಜಿ ಸಪೋರ್ಟ್ ಮಾಡಬಲ್ಲ ರಿಲಯನ್ಸ್ ಜಿಯೋ ಫೀಚರ್ ಫೋನ್ ಉಚಿತವಾಗಿ ಜಿಯೋ ಗ್ರಾಹಕರಿಗೆ ನೀಡಲಿದ್ದಾರೆ. ಆದರೆ ಭದ್ರತಾ ಠೇವಣಿಯಾಗಿ ಗ್ರಾಹಕರು ರೂ.1500 ನೀಡಬೇಕಿರುತ್ತದೆ. ಈ ಭದ್ರತಾ ಠೇವಣಿಯನ್ನು ಮೂರು ವರ್ಷಗಳ ನಂತರ ಗ್ರಾಹಕರಿಗೆ ಹಿಂದಿರುಗಿಸಲಾಗುತ್ತದೆ. ಮೂರು ವರ್ಷದ ನಂತರ ಬಳಸಿದ ಫೋನ್ ವಾಪಸ್ ನೀಡಿ ಭದ್ರತಾ ಠೇವಣಿಯಾಗಿ ನೀಡಿದ್ದ ರೂ.1,500 ಹಿಂಪಡೆಯಬಹುದು.

ರಿಲಯನ್ಸ್ ಫೀಚರ್ ಫೋನ್ ಬುಕಿಂಗ್ ಅಗಸ್ಟ್ 24 ರಿಂದ ಆರಂಭವಾಗಲಿದ್ದು, ಸೆಪ್ಟೆಂಬರ್ ನಲ್ಲಿ ಫೋನ್ ಗ್ರಾಹಕರ ಕೈ ಸೇರಲಿದೆ.

ದೇಶದಲ್ಲಿ 78 ಕೋಟಿಯಷ್ಟು ಮೊಬೈಲ್ ಬಳಕೆಯಲ್ಲಿದ್ದರೆ, ಅದರಲ್ಲಿ 50 ಕೋಟಿ ಮೊಬೈಲ್ ಗಳು ಫೀಚರ್ ಫೋನ್ ಗಳಾಗಿವೆ. ಇವರೆಲ್ಲಾ ಎಲ್ಟಿಇ ಸಪೋರ್ಟ್ ಮಾಡುವ ಮೊಬೈಲ್ ಕೊಳ್ಳಲಾರದವರು ಎಂದು ಮುಖೇಶ್ ಹೇಳಿದ್ದಾರೆ. ಈಗ ಅಂತಹವರಿಗೆ ಜಿಯೋ ಫೀಚರ್ ಫೋನ್ ಉತ್ತಮ ಆಯ್ಕೆಯಾಗಲಿದೆ.

Click for More Interesting News

Loading...
error: Content is protected !!