ಜಿಯೋ ಪ್ರೈಮ್ ಮೆಂಬರ್ಷಿಪ್ ಗಡುವು ವಿಸ್ತರಣೆ ಅನುಮಾನ, ಉಳಿದಿರುವುದು ಒಂದೇ ದಿನ?

ರಿಲಯನ್ಸ್ ಜಿಯೋ ತನ್ನ ಪ್ರೈಮ್ ಟೈಮ್ ಮೆಂಬರ್ಷಿಪ್ ಗಡುವನ್ನು ಏಪ್ರಿಲ್ 30 ರವರೆಗೂ ವಿಸ್ತರಿಸುವ ಸಾಧ್ಯತೆಯಿದೆ ಎಂಬ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಪ್ರೈಮ್ ಮೆಂಬರ್ಷಿಪ್ ಗೆ ನೀಡಿದ್ದ ಮಾರ್ಚ್ 31 ರ ಗಡುವನ್ನು ವಿಸ್ತರಿಸುವ ಯಾವುದೇ ಆಲೋಚನೆ ಇಲ್ಲವೆಂದು ಮಾಹಿತಿ ಬಂದಿದೆ. ಉಚಿತ ಆಫರ್ ಮುಗಿಯಲು ಇನ್ನು ಒಂದು ದಿನ ಮಾತ್ರ ಉಳಿದಿದೆ. ಜಿಯೋಗೆ ಹತ್ತು ಕೋಟಿಗೂ ಹೆಚ್ಚು ಗ್ರಾಹಕರಿದ್ದು, ಈಗಾಗಲೇ 5 ಕೋಟಿ ಜನ ಪ್ರೈಮ್ ಸದಸ್ಯರಾಗಿ ಬದಲಾಗಿದ್ದಾರೆ. ಇನ್ನುಳಿದಿರುವ ಒಂದು ದಿನದಲ್ಲಿ ಮತ್ತಷ್ಟು ಜನ ಸೇರುತ್ತಾರೆ ಎಂದು ಜಿಯೋ ಭಾವಿಸುತ್ತಿರುವ ಜಿಯೋ, ಗಡುವು ವಿಸ್ತರಿಸಲು ಆಸಕ್ತಿ ತೋರಿಸಿಲ್ಲ ಎನ್ನಲಾಗಿದೆ.

ಮತ್ತೊಂದು ಕಡೆ 5 ಕೋಟಿ ಪೆಯ್ಡ್ ಗ್ರಾಹಕರೊಂದಿಗೆ ಜಿಯೋ, ದೇಶದಲ್ಲಿ ಅಗ್ರಸ್ಥಾನದಲ್ಲಿ ನಿಂತಿದೆ. ಇಲ್ಲಿಯವರೆಗೂ ಏರ್ಟೆಲ್ 3.77 ಕೋಟಿ ಗ್ರಾಹಕರೊಂದಿಗೆ ಮೊದಲ ಸ್ಥಾನದಲ್ಲಿದ್ದು, ಈಗ ಎರಡನೇ ಸ್ಥಾನಕ್ಕೆ ಕುಸಿದಿದೆ.

ರೂ.99 ಪಾವತಿಸಿ ಒಮದು ವರ್ಷದವರೆಗೂ ಪ್ರೈಮ್ ಮೆಂಬರ್ಷಿಪ್ ಪಡೆದವರು ರೂ.149 ರಿಂದ ರೂ.9,999 ರಚರೆಗೂ ಲಭ್ಯವಿರುವ ಡಾಟಾ ಪ್ಯಾಕ್ ಗಳನ್ನು ಆರಿಸಿಕೊಳ್ಳಬಹುದು. ಪ್ರೈಮ್ ಸದಸ್ಯರಿಗೆ ರೀಚಾರ್ಚ್ ಡಾಟಾ ಪ್ಯಾಕ್ ರೀಚಾರ್ಜ್ ಮಾಡಿದರೂ ಮಾಡದಿದ್ದರೂ ಹೆಚ್ಚುವರಿಯಾಗಿ 120 ಜಿಬಿ ವರೆಗೆ ಡಾಟಾ ನೀಡಲು ಜಿಯೋ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೆ ಜಿಯೋ ಮನಿ ಆಪ್ ಮೂಲಕ ರೀಚಾರ್ಜ್ ಮಾಡಿಕೊಂಡವರಿಗೆ ಕ್ಯಾಷ್ ಬ್ಯಾಕ್ ಸಹಾ ಪ್ರಕಟಿಸಿದೆ.

ರೂ. 99 ರೀಚಾರ್ಜ್ ಮಾಡಿಸದೆ ಜಿಯೋ ಪ್ರೈಮ್ ಮೆಂಬರ್ಷಿಪ್ ಪಡೆಯದವರಿಗೆ ಸಂಪರ್ಕ ಕಡಿತಗೊಳ್ಳುವುದಿಲ್ಲ. ಬದಲಿಗೆ ಈಗಿರುವ ಉಚಿತ ಕೊಡುಗೆ ಕೊನೆಗೊಳ್ಳಲಿದೆ. ಮತ್ತು ಪ್ರೈಮ್ ಮೆಂಬರ್ಸ್ ಡಾಟಾ ಪ್ಯಾಕ್ ಗಳಿಗೆ ಪಾವತಿ ಮಾಡುವುದಕ್ಕಿಂತ ಪ್ರೈಮ್ ಸದಸ್ಯರಲ್ಲದವರು ಹೆಚ್ಚು ಪಾವತಿ ಮಾಡಬೇಕಿರುತ್ತದೆ.