ಜಿಯೋ ಕೊಡುಗೆಗಳಿಗೆ ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಷನ್ ಕಳವಳ – News Mirchi

ಜಿಯೋ ಕೊಡುಗೆಗಳಿಗೆ ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಷನ್ ಕಳವಳ

ರಿಲಯನ್ಸ್ ಜಿಯೋ ಹರಿಸುತ್ತಿರುವ ಕೊಡುಗೆಗಳು ಉಳಿದ ಟೆಲಿಕಾಂ ಕಂಪನಿಗಳ ಮೇಲೆ ಈಗಾಗಲೇ ಗಂಭೀರ ಪರಿಣಾಮ ಬೀರುತ್ತಿದೆ. ಆರಂಭದಲ್ಲಿ ವೆಲ್ಕಮ್ ಆಫರ್, ನಂತರ ನ್ಯೂ ಇಯರ್ ಆಫರ್, ಈಗ ಪ್ರೈಮ್ ಹೆಸರಿನಲ್ಲಿ ಮತ್ತೆ 15 ದಿನಗಳ ವಿಸ್ತರಣೆಯ ಜೊತೆ ರೂ.303 ರೀಚಾರ್ಜ್ ನೊಂದಿಗೆ ಮತ್ತೆ ಮೂರು ತಿಂಗಳ ಉಚಿತ ಕೊಡುಗೆ ಎಲ್ಲಾ ಟೆಲಿಕಾಂ ಕಂಪನಿಗಳನ್ನು ಆತಂಕಕ್ಕೆ ದೂಡಿದೆ. ಇದೀಗ ಜಿಯೋ ಕೊಡುಗೆಗಳ ಕುರಿತು ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಷನ್ (ಸಿಒಎಐ) ಆತಂಕ ವ್ಯಕ್ತಪಡಿಸಿದ ‘ಕಾಯ್’, ಜಿಯೋ ನೀಡುತ್ತಿರುವ ಕೊಡುಗೆಗಳು ಟೆಲಿಕಾಂ ಉದ್ಯಮಕ್ಕೆ ಹಾನಿ ಮಾಡಲಿದೆ ಎಂದು ಹೇಳಿದೆ.

ಜಿಯೋ ಪ್ರಭಾವ ಟೆಲಿಕಾಂ ಇಂಡಸ್ಟ್ರಿಯಲ್ಲಿ ಪಾಲುದಾರರಾಗುವ ಬ್ಯಾಂಕುಗಳು ಮತ್ತಿತರರ ಮೇಲೂ ಬೀಳಲಿದೆ ಎಂದು ಕಾಯ್ ಹೇಳಿದೆ ಹೇಳಿದೆ. ಕಡಿಮೆ ದರದಲ್ಲಿ ಸೇವೆ ನೀಡುವುದು ಗ್ರಾಹಕರಿಗೆ ಒಳ್ಳೆಯದಾಗಬಹುದು. ಅದು ಆದರೆ ದರಗಳ ನಿಯಮಗಳ ಪ್ರಕಾರ ಇವೆಯೇ ಎಂಬುದು ಪ್ರಶ್ನೆಯಾಗಿದೆ ಎಂದು ಜಾಯ್(ಸಿಒಎಐ) ಹೇಳಿದೆ. ಈ ಸಮಸ್ಯೆಯನ್ನು ಟೆಲಿಕಾಂ ಟ್ರಿಬ್ಯುನಲ್ ಮತ್ತು ನ್ಯಾಯಾಲಯಗಳೇ ಬಗೆಹರಿಸಬೇಕು. ಟೆಲಿಕಾಂ ಕ್ಷೇತ್ರ ರೂ.4.60 ಲಕ್ಷ ಕೋಟಿಗಳಷ್ಟು ಹಣ ವಿವಿಧ ಹಣಕಾಸು ಸಂಸ್ಥೆಗಳು, ಬ್ಯಾಂಕುಗಳಿಗೆ ಬಾಕಿಯಿದೆ. ಈಗ ಜಿಯೋ ನೀಡುತ್ತಿರುವ ಕೊಡುಗೆಗಳು ಈ ಉದ್ಯಮಕ್ಕೆ ಹೊಡೆತ ನೀಡುತ್ತಿದೆ ಎಂದು ಕಾಯ್ ಅಭಿಪ್ರಾಯ ವ್ಯಕ್ತಪಡಿಸಿದೆ.

Loading...