jio-tv-olympics

ಕ್ರೀಡಾಭಿಮಾನಿಗಳಿಗೆ ಜಿಯೋ ಸಂಸ್ಥೆಯಿಂದ ಸಿಹಿ ಸುದ್ದಿ

ಕ್ರೀಡಾಭಿಮಾನಿಗಳಿಗೆ ರಿಲಯನ್ಸ್ ಜಿಯೋ ಒಂದು ಅತ್ಯುತ್ಯಮ ಅವಕಾಶ ನೀಡುತ್ತಿದೆ. ನಾಳೆಯಿಂದ ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ ಪಿಯಾಂಗ್ ಚಾಂಗ್ ವಿಂಟರ್ ಒಲಂಪಿಕ್ಸ್ ಅನ್ನು ತನ್ನ ಪ್ರಸಿದ್ಧ ಜಿಯೋ ಟಿವಿ ಆಪ್ ಮೂಲಕ ನೇರ ಪ್ರಸಾರ ಮಾಡಲಿದೆ.

olympics 2018

ಪಿಯಾಂಗ್ ಚಾಂಗ್ ಒಲಂಪಿಕ್ಸ್ 2018 ನೇರ ಪ್ರಸಾರ ಹಕ್ಕುಗಳನ್ನು ಒಲಂಪಿಕ್ ಸಮಿತಿಯಿಂದ ಪಡೆದಿದ್ದೇವೆ ಎಂದು ರಿಲಯನ್ಸ್ ಜಿಯೋ ಪ್ರಕಟಿಸಿದೆ. ಫೆಬ್ರವರಿ 9 ರಿಂದ 25 ರವರೆಗೆ ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ ಒಲಂಪಿಕ್ಸ್ ಲೈವ್ ಅಪ್ಡೇಟ್ ಗಳನ್ನು ದೇಶಾದ್ಯಂತ ನೇರ ಪ್ರಸಾರ ಮಾಡುವುದಾಗಿ ಜಿಯೋ ಸಂಸ್ಥೆ ಹೇಳಿದೆ.

jioಜಿಯೋ ಟಿವಿ ಆಪ್ ಮೂಲಕ ಲೈವ್ ಕವರೇಜ್ ನೀಡಲು ಅಂತರಾಷ್ಟ್ರೀಯ ಒಲಂಪಿಕ್ ಸಮಿತಿಯೊಂದಿಗೆ ರಿಲಯನ್ಸ್ ಜಿಯೋ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಲಕ್ಷಾಂತರ ಜನರು ತಮ್ಮ ಮೊಬೈಲ್ ಆಪ್ ಮೂಲಕ ಒಲಂಪಿಕ್ಸ್ ನೇರ ಪ್ರಸಾರವನ್ನು ವೀಕ್ಷಿಸುವ ಅವಕಾಶ ಲಭಿಸಿದಂತಾಗಿದೆ.

olympics2018ಜಿಯೋ ಸಂಸ್ಥೆಯ ಈ ಪ್ರಯತ್ನ ಡಿಜಿಟಲ್ ಪ್ಲಾಟ್ ಫಾರ್ಮ್ ನಲ್ಲಿ ಮೊಟ್ಟ ಮೊದಲ ಬಾರಿಗೆ ಮಹತ್ವದ ಹೆಜ್ಜೆ ಇರಿಸಿದಂತಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಜಿಯೋದಂತೆಯೇ ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಭೂತಾನ್, ನೇಪಾಳ, ಮಾಲ್ ದ್ವೀಪಗಳಲ್ಲಿಯೂ ಏಷ್ಯಾ ಫೆಸಿಫಿಕ್ ಯೂನಿಯನ್ ಮೂಲಕ ನೇರ ಪ್ರಸಾರ ಮಾಡುವುದಾಗಿ ಅಂತರಾಷ್ಟ್ರೀಯ ಒಲಂಪಿಕ್ಸ್ ಸಮಿತಿ ಹೇಳಿದೆ.

jio-digital-life

ನೂರಾರು ಕೋಟಿ ವೆಚ್ಚದೊಂದಿಗೆ ಅದ್ಧೂರಿಯಾಗಿ ನಿರ್ಮಿಸಿರುವ ಬೃಹತ್ ಸ್ಟೇಡಿಯಂನಲ್ಲಿ ‘ಒಲಂಪಿಕ್ಸ್ ವಿಂಟರ್ ಗೇಮ್ಸ್ 2018’ ದಕ್ಷಿಣ ಕೊರಿಯಾ, ಪಿಯಾಂಗ್ ಚಾಂಗ್ ಕೌಂಟಿಯಲ್ಲಿ ನಡೆಯಲಿವೆ. ಸ್ಕೇಟಿಂಗ್, ಲ್ಯೂಗೇ, ಸ್ಕೈ ಜಂಪಿಂಗ್, ಐಸ್ ಹಾಕಿ, ಸೇರಿದಂತೆ 15 ಕ್ರೀಡೆಗಳಲ್ಲಿ 102 ಕಾರ್ಯಕ್ರಮಗಳು ನಡೆಯಲಿವೆ. ಭಾರತವೂ ಸೇರಿದಂತೆ 90ಕ್ಕೂ ಹೆಚ್ಚು ದೇಶಗಳು ಈ ಕ್ರೀಡೆಗಳಲ್ಲಿ ಪಾಲ್ಗೊಳ್ಳಲಿವೆ.

jio-android-app

ಅದಕ್ಕೇ ನಾನು ನಕ್ಕಿದ್ದು, ಆದರೆ ಪ್ರಧಾನಿ ಟೀಕೆ ಸರಿಯಲ್ಲ : ರೇಣುಕಾ ಚೌಧರಿ

ಇನ್ನು ರಿಲಯನ್ಸ್ ಜಿಯೋ ಆಂಡ್ರಾಯ್ಡ್ ಆಪ್ ಲಕ್ಷಾಂತರ ಸಂಖ್ಯೆಯಲ್ಲಿ ಡೌನ್ಲೋಡ್ ಆಗಿದ್ದು, ಸುಮಾರು 400 ಚಾನೆಲ್ ಗಳು, 60 ಹೆಚ್.ಡಿ.ಚಾನೆಲ್ ಗಳನ್ನು ವೀಕ್ಷಿಸುವ ಸೌಲಭ್ಯವನ್ನು ಜಿಯೋ ನೀಡುತ್ತಿದೆ. ಇಂಗ್ಲೀಷ್, ಹಿಂದಿ, ಕನ್ನಡ, ತೆಲುಗು, ಪಂಜಾಬಿ, ಮರಾಠಿ, ಉರ್ದು, ಮಲಯಾಳಂ, ಬೆಂಗಾಲಿ, ತಮಿಳು, ಗುಜರಾತಿ, ಒಡಿಯಾ, ಭೋಜ್ಪುರಿ, ಅಸ್ಸಾಮಿ, ನೇಪಾಳಿ, ಫ್ರೆಂಚ್ ನುಂತಹ ವಿವಿಧ ಭಾಷೆಗಳಲ್ಲಿನ ಚಾನೆಲ್ ಗಳು ಜಿಯೋ ಟಿವಿ ಆಪ್ ನಲ್ಲಿ ಸಿಗುತ್ತಿವೆ.

Get Latest updates on WhatsApp. Send ‘Subscribe’ to 8550851559