ಸೋಫೀಯಾನ್ ಎನ್ಕೌಂಟರ್: ಒಬ್ಬ ಯೋಧ ಹುತಾತ್ಮ, ಮೂವರಿಗೆ ಗಾಯ – News Mirchi

ಸೋಫೀಯಾನ್ ಎನ್ಕೌಂಟರ್: ಒಬ್ಬ ಯೋಧ ಹುತಾತ್ಮ, ಮೂವರಿಗೆ ಗಾಯ

ದಕ್ಷಿಣ ಕಾಶ್ಮೀರದ ಸೋಫಿಯಾನ್ ಜಿಲ್ಲೆಯ ಗ್ರಾಮವೊಂದರಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ನಡೆದ ಎನ್ಕೌಂಟರ್ ನಲ್ಲಿ ಒಬ್ಬ ಯೋಧ ಹುತಾತ್ಮನಾಗಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

55 ನೇ ರಾಷ್ಟ್ರೀಯ ರೈಫಲ್ಸ್, ರಾಜ್ಯ ವಿಶೇಷ ಕಾರ್ಯಚರಣಾ ಪಡೆ ಮತ್ತು ಕೇಂದ್ರ ರಿಸರ್ವ್ ಪಡೆಗಳು ಉಗ್ರರಿಗಾಗಿ ಶೋಧ ಕಾರ್ಯಚರಣೆ ನಡೆಯುತ್ತಿದ್ದಾಗ ಭದ್ರತಾ ಪಡೆಗಳ ಮೇಲೆ ಉಗ್ರರು ದಾಳಿಗೆ ಮುಂದಾದರು. ಭದ್ರತಾ ಪಡೆಗಳೂ ಪ್ರತಿದಾಳಿ ನಡೆಸಿದರು. ಈ ವೇಳೆ ಒಬ್ಬ ಯೋಧ ಮೃತರಾಗಿದ್ದು, ಗಾಯಗೊಂಡ ಯೋಧರನ್ನು ಸೇನಾಸ್ಪತ್ರೆಗೆ ದಾಖಲಿಸಲಾಗಿದೆ.

Loading...