ಸುಪ್ರೀಂ ಕೋರ್ಟ್ ಮುಂದಿನ ಮುಖ್ಯ ನ್ಯಾಯಮೂರ್ತಿ ಜಸ್ಟೀಸ್ ದೀಪಕ್ ಮಿಶ್ರಾ – News Mirchi

ಸುಪ್ರೀಂ ಕೋರ್ಟ್ ಮುಂದಿನ ಮುಖ್ಯ ನ್ಯಾಯಮೂರ್ತಿ ಜಸ್ಟೀಸ್ ದೀಪಕ್ ಮಿಶ್ರಾ

ನವದೆಹಲಿ: 45ನೇ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ)ಯಾಗಿ ಜಸ್ಟೀಸ್ ದೀಪಕ್ ಮಿಶ್ರಾ (63) ನೇಮಕವಾಗಲಿದ್ದಾರೆ. ಸದ್ಯ ಸುಪ್ರೀಂ ಕೋರ್ಟ್ ನಲ್ಲಿ ಅತ್ಯಂತ ಹಿರಿಯರಾಗಿರುವ ನ್ಯಾಯಮೂರ್ತಿ ದೀಪಕ್ ಮಿಶ್ರಾರವರನ್ನು ಮುಂದಿನ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಿ ಕಾನೂನು ಸಚಿವಾಲಯ ಮಂಗಳವಾರ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ.

ಸದ್ಯ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸುತ್ತಿರುವ ಜಸ್ಟೀಸ್ ಜೆ.ಎಸ್.ಖೇಹರ್ ಆಗಸ್ಟ್ 28 ರಂದು ನಿವೃತ್ತಿಯಾದ ನಂತರ ಜಸ್ಟೀಸ್ ಮಿಶ್ರಾ ಮುಖ್ಯ ನ್ಯಾಯಮೂರ್ತಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. 13 ತಿಂಗಳ ಕಾಲ ಅವರು ಈ ಹುದ್ದೆಯಲ್ಲಿ ಮುಂದುವರೆಯುತ್ತಾರೆ. ಜಸ್ಟೀಸ್ ದೀಪಕ್ ಮಿಶ್ರಾ ರವರನ್ನು ಮುಂದಿನ ನ್ಯಾಯಮೂರ್ತಿಯಾಗಿ ನೇಮಕ ಮಾಡಬೇಕೆಂದು ಜಸ್ಟೀಸ್ ಖೇಹರ್ ಕಳೆದ ತಿಂಗಳು ಕಾನೂನು ಸಚಿವಾಲಯಕ್ಕೆ ಶಿಫಾರಸು ಮಾಡಿದ್ದರು. ಸಿಜೆಐ ಹುದ್ದೆಯನ್ನು ಅಲಂಕರಿಸಲಿರುವ ಒಡಿಶಾದ ಮೂರನೇ ವ್ಯಕ್ತಿ ಜಸ್ಟೀಸ್ ದೀಪಕ್ ಮಿಶ್ರಾ.

ಫಲಿಸದ ಬಿಜೆಪಿ ತಂತ್ರ : ಅಹಮದ್ ಪಟೇಲ್ ಗೆಲುವು

ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿದ್ದಾಗ ಹಲವು ಪ್ರಕರಣಗಳಲ್ಲಿ ಸಂಚಲನ ತೀರ್ಪುಗಳನ್ನು ಜಸ್ಟೀಸ್ ಮಿಶ್ರಾ ನೀಡಿದ್ದರು. 1993 ರ ಮುಂಬೈ ಸ್ಪೋಟಗಳಿಗೆ ಸಂಬಂಧಿಸಿದಂತೆ ಯಾಕೂಬ್ ಮೆಮನ್ ಗೆ ಗಲ್ಲು ಶಿಕ್ಷೆಯನ್ನು ಜಾರಿ ಮಾಡಲು ಮಧ್ಯರಾತ್ರಿ 1 ಗಂಟೆಗೆ ಸುಪ್ರೀಂ ಕೋರ್ಟ್ ಬಾಗಿಲು ತೆರೆದು ವಿಚಾರಣೆ ನಡೆಸಿದ ನ್ಯಾಯಪೀಠದ ನೇತೃತ್ವವನ್ನು ಇವರು ವಹಿಸಿದ್ದರು. ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ನಿರ್ಭಯಾ ಮೇಲಿನ ಕ್ರೂರವಾದ ಅತ್ಯಾಚಾರ ಪ್ರಕರಣದಲ್ಲಿ ನಾಲ್ವರಿಗೆ ದೆಹಲಿ ಹೈಕೋರ್ಟ್ ವಿಧಿಸಿದ್ದ ಮರಣದಂಡನೆಯನ್ನು ಅವರು ಎತ್ತಿಹಿಡಿದಿದ್ದರು.

ಚಲನಚಿತ್ರ ಪ್ರದರ್ಶನಕ್ಕೂ ಮೊದಲು ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಹಾಕಬೇಕು ಎಂದು ತೀರ್ಪು ನೀಡಿದ್ದು ಜಸ್ಟೀಸ್ ಮಿಶ್ರಾ. ಎಫ್.ಐ.ಆರ್. ರಿಜಿಸ್ಟರ್ ಆದ 24 ಗಂಟೆಗಳೊಳಗೆ ಅವುಗಳನ್ನು ವೆಬ್ಸೈಟ್ ಗಳಲ್ಲಿ ಹಾಕಬೇಕು ಎಂದು ಮಿಶ್ರಾ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಆದೇಶಿಸಿದ್ದರು.

Loading...