ವಿಧಾನಸಭೆ ಅಧಿವೇಶನದಲ್ಲಿ ರಾಷ್ಟ್ರಗೀತೆಗೆ ಅವಮಾನ

ಜಮ್ಮೂ ಕಾಶ್ಮೀರ ವಿಧಾನಸಭೆ ಅಧಿವೇಶನದ ಆರಂಭದ ದಿನವೇ ರಾಷ್ಟ್ರ ಗೀತೆಗೆ ಅವಮಾನ ಮಾಡಲಾಗಿದೆ. ಅಧಿವೇಶನ ಆರಂಭವಾದಾಗಿನಿಂದಲೂ ಬಿಜೆಪಿ-ಪಿಡಿಪಿ ಮೈತ್ರಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಪಕ್ಷಗಳು ಸಭೆಗೆ ಅಡ್ಡಿಪಡಿಸಿದವು. ಸಭೆಯ ಆರಂಭದಲ್ಲಿ ರಾಷ್ಟ್ರಗೀತೆ ಪ್ರಸಾರವಾದಾಗಲೂ ಪ್ರತಿಪಕ್ಷಗಳ ಘೋಷಣೆಗಳು ಮುಂದುವರೆದವು.

ರಾಜ್ಯಪಾಲ ಎನ್‌.ಎನ್.ವ್ಹೋರಾ ಕಲಾಪಕ್ಕೆ ಸದನಕ್ಕೆ ಹಾಜರಾಗುತ್ತಿದ್ದಾಗಲೇ ಎನ್ಸಿಪಿ, ಕಾಂಗ್ರೆಸ್, ಸಿಪಿಎಂ, ಸ್ವತಂತ್ರ ಶಾಸಕರು ಸರ್ಕಾರದ ವಿರುದ್ಧ ಪ್ಲಕಾರ್ಡ್ ಪ್ರದರ್ಶಿಸಿದರು, ಇನ್ನು ಕೆಲವರು ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಿದರು.

ಹೀಗಾಗಿ ರಾಜ್ಯಪಾಲರು ಮಾತನಾಡಬೇಕಿದ್ದ ವಿಷಯವನ್ನು ಸಂಕ್ಷಿಪ್ತವಾಗಿ ಉಭಯ ಸದನಗಳಲ್ಲಿ ಮಾತನಾಡಿ ಹೊರಟು ಹೋದರು. ಹೊಸ ವರ್ಷದಲ್ಲಿ ಆದರೂ ರಾಜ್ಯದಲ್ಲಿ ಶಾಂತಿ ನೆಲೆಸಲಿ ಎಂದು ರಾಜ್ಯಪಾಲರು ಹೇಳಿದರು.

ಪ್ರತಿಪಕ್ಷಗಳ ವರ್ತನೆ ನಾಚಿಕೆಗೇಡು, ರಾಷ್ಟ್ರಗೀತೆಗೆ ಅವಮಾನ ಮಾಡಿದ ಕುರಿತು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಉತ್ತರಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

BJP legislator accused opposition party of creating ruckus in J&K assembly while the National Anthem was being played, hence insulting the National Anthem.

Related News

Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache