ನಮ್ಮ ಮೆಟ್ರೋ ಆಪ್ ಬಿಡುಗಡೆ ಮಾಡಿದ ಸಚಿವ ಜಾರ್ಜ್

ಬೆಂಗಳೂರು: ನಗರದ ಮೆಟ್ರೋ ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು ಮೆಟ್ರೋ ರೈಲು ನಿಗಮದ ಅಧಿಕೃತ ಮೊಬೈಲ್ ಆಪ್ ಗೆ ಇಂದು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಚಾಲನೆ ನೀಡಿದರು.

ಬೆಂಗಳೂರು ಮೆಟ್ರೋ ರೈಲು ನಿಗಮವು ಕೇಂದ್ರ ಸರ್ಕಾರದ ಸುಧಾರಿತ ಕಂಪ್ಯೂಟಿಂಗ್ ಕೇಂದ್ರ ನೆರವಿನೊಂದಿಗೆ ಅಭಿವೃದ್ಧಿಪಡಿಸಿದ ಆಂಡ್ರಾಯ್ಡ್ ಮೊಬೈಲ್ ಆಪ್ ಹೊರತಂದಿದೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಆಪ್ ಡೌನ್ ಲೊಡ್ ಮಾಡಿಕೊಳ್ಳಬಹುದು. ಪ್ರಯಾಣಿಕರಿಗೆ ಪ್ರಯಾಣದ ರೂಟ್ ಮ್ಯಾಪ್, ಬಸ್ ಸಂಪರ್ಕ ಮಾಹಿತಿ, ಪ್ರಯಾಣ ದರ, ತಲುಪಬೇಕಿರುವ ನಿಲ್ದಾಣದ ದೂರ ಮುಂತಾದ ಮಾಹಿತಿಗಳನ್ನು ಒಳಗೊಂಡಿದೆ.