ರಾಜೀನಾಮೆ ಇಲ್ಲ, ನಾಯಕರ ಮನವೊಲಿಕೆ ನಂತರ ಯೂ ಟರ್ನ್ – News Mirchi

ರಾಜೀನಾಮೆ ಇಲ್ಲ, ನಾಯಕರ ಮನವೊಲಿಕೆ ನಂತರ ಯೂ ಟರ್ನ್

ಚಿಕ್ಕಬಳ್ಳಾಪುರ: ಕಾಂಗ್ರೆಸ್ ನಾಯಕರೊಂದಿಗೆ ಮುನಿಸಿಕೊಂಡು ಇಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ ರೆಡ್ಡಿ, ಇದೀಗ ಯೂ ಟರ್ನ್ ಹೊಡೆದಿದ್ದಾರೆ. ಕಾಂಗ್ರೆಸ್ ನಾಯಕರ ಮನವೊಲಿಕೆಯ ನಂತರ ಈ ಬೆಳವಣಿಗೆ ನಡೆದಿದೆ.

ಸಚಿವ ರಾಮಲಿಂಗಾರೆಡ್ಡಿ, ಸಂಸದ ಕೆ.ಹೆಚ್.ಮುನಿಯಪ್ಪ, ದಿನೇಶ್ ಗುಂಡೂರಾವ್ ಮುಂತಾದವರು ಸುಧಾಕರ್ ರೆಡ್ಡಿ ಅವರನ್ನು ಭೇಟಿ ಮಾಡಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೂ ಮೊದಲು ಶುಕ್ರವಾರ ಬೆಳಗ್ಗೆ 11 ಗಂಟೆಗೆ ರಾಜೀನಾಮೆ ನೀಡುತ್ತೇನೆ ಎಂದು ಟ್ವಿಟರ್ ನಲ್ಲಿ ಶಾಸಕರು ಹೇಳಿಕೊಂಡಿದ್ದರು.

ಚಿಕ್ಕಬಳ್ಳಾಪುರ ಸಂಸದ ವೀರಪ್ಪ ಮೊಯಿಲಿ ಅವರೊಂದಿಗಿನ ಭಿನ್ನಾಭಿಪ್ರಾಯ, ತಮ್ಮ ತಂದೆ ಕೇಶವರೆಡ್ಡಿಯವರನ್ನು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಮುಖ್ಯಮಂತ್ರಿ ಮತ್ತು ಪರಮೇಶ್ವರ್ ಅವರು ತೀರ್ಮಾನಿಸಿದ್ದು, ಇವೆಲ್ಲಾ ಕಾರಣಗಳಿಂದ ಮುನಿಸಿಕೊಂಡಿದ್ದ ಸುಧಾಕರ್ ರಾಜೀನಾಮೆ ತೀರ್ಮಾನಕ್ಕೆ ಬಂದಿದ್ದರು. ಶಾಸಕರ ರಾಜೀನಾಮೆ ತೀರ್ಮಾನ ಹೊರಬೀಳುತ್ತಿದ್ದಂತೆ, ಸಂಸದ ವೀರಪ್ಪಮೊಯಿಲಿ ಅವರ ನಿವಾಸದ ಮೇಲೆ ಕಾರ್ಯಕರ್ತರು ಕಲ್ಲೆಸೆದು ಆಕ್ರೋಶ ವ್ಯಕ್ತಪಡಿಸಿದ್ದರು.

Contact for any Electrical Works across Bengaluru

Loading...
error: Content is protected !!