ಸಾರಾಯಿ ಮಾರಿ ಸರ್ಕಾರ ನಡೆಸಬೇಡಿ: ಕಾಗೇರಿ

ಬೆಳಗಾವಿ: ರಾಜ್ಯದಲ್ಲಿ ಬರಗಾಲ ಆವರಿಸಿರುವ ಸಂದರ್ಭದಲ್ಲಿ ಮದ್ಯ ಮಾರಾಟಕ್ಕೆ ಸರ್ಕಾರ ಟಾರ್ಗೆಟ್ ನೀಡಿರುವುದು ಮತ್ತು 900 ಹೊಸ ಮದ್ಯದಂಗಡಿಗಳಿಗೆ ಅನುಮತಿ ನೀಡಿರುವುದಕ್ಕೆ ಬಿಜೆಪಿ ಸದಸ್ಯರು ವಿಧಾನಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಮಯದಲ್ಲಿ ಮಾತನಾಡಿದ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ, ಈ ವರ್ಷ ಮದ್ಯ ಮಾರಾಟಕ್ಕೆ ಟಾರ್ಗೆಟ್ ನೀಡಬೇಡಿ, ಸಾರಾಯಿ ಮಾರಿ ಸರ್ಕಾರ ನಡೆಸೋ ಯೋಚನೆ ಮಾಡಬೇಡಿ ಎಂದರು.

ಕಾಗೇರಿಯವರ ಮಾತಿಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಬಕಾರಿ ಸುಂಕ ಸಂಗ್ರಹಕ್ಕೆ ಮಾತ್ರ ಟಾರ್ಗೆಟ್ ನೀಡಿದ್ದೇವೆ, ಮದ್ಯ ಮಾರಾಟಕ್ಕೆ ಯಾವುದೇ ಟಾರ್ಗೆಟ್ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.