ಉಲ್ಟಾ ಹೊಡೆದ ಕಮಲ್, ಮೋದಿ ಕ್ರಮ ಸಮರ್ಥಿಸಿಕೊಂಡಿದ್ದಕ್ಕೆ ಕ್ಷಮೆಯಾಚನೆ

ಚೆನ್ನೈ: ನಟ ಕಮಲ್ ಹಾಸನ್ ಅವರಲ್ಲಿ ಈಗಾಗಲೇ ರಾಜಕೀಯ ನಾಯಕನ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಈ ಹಿಂದೆ ನೋಟು ರದ್ದು ಕ್ರಮವನ್ನು ಸಮರ್ಥಿಸಿಕೊಳ್ಳುತ್ತಾ ಮೋದಿಯವರನ್ನು ಹೊಗಳಿದ ಕಮಲ್, ಇದೀಗ ಉಲ್ಟಾ ಹೊಡೆದಿದ್ದಾರೆ.

ಮೋದಿಯವರ ನೋಟು ರದ್ದು ಕ್ರಮವನ್ನು ಸಮರ್ಥಿಸಿಕೊಂಡು ತಪ್ಪು ಮಾಡಿದೆ. ಬಡವರಿಗಾಗಿ ಅಲ್ಲ, ಶ್ರೀಮಂತರಿಗಾಗಿ ಆತುರಪಟ್ಟು ನೋಟು ರದ್ದು ಕ್ರಮ ಕೈಗೊಂಡು ಮೋದಿ ತಪ್ಪು ಮಾಡಿದ್ದಾರೆ. ನೋಟು ರದ್ದು ಕ್ರಮದಿಂದ ಧನಿಕರಗಷ್ಟೇ ಲಾಭವಾಗಿದ್ದು, ಬಡವರು ಬೀದಿಗೆ ಬಿದ್ದಿದ್ದಾರೆ. ಮೋದಿಯವರೂ ತಮ್ಮ ತಪ್ಪು ತಿದ್ದುಕೊಂಡರೆ ಅವರಿಗೂ ಸೆಲ್ಯೂಟ್ ಮಾಡುತ್ತೇನೆ ಎಂದು ಕಮಲ್ ಹೇಳಿದ್ದಾರೆ.

ತಮಿಳು ಮ್ಯಾಗ್ಜೀನ್ ಗೆ ಬರೆದ ಲೇಖನದಲ್ಲಿ ಕಮಲ್ ಹಾಸನ್ ಈ ಹೇಳಿಕೆ ನೀಡಿದ್ದಾರೆ. ತಪ್ಪನ್ನು ಒಪ್ಪಿಕೊಳ್ಳುವುದು, ಅದನ್ನು ಸರಿಪಡಿಸಿಕೊಳ್ಳುವುದು ರಾಜನೀತಿಯ ಲಕ್ಷಣ ಎಂದು ಅವರು ಹೇಳಿದ್ದಾರೆ.

[ಇದನ್ನೂ ಓದಿ: ಪ್ರಿಯಕರನನ್ನು ಮದುವೆಯಾಗಲು ತನ್ನ ಕಿಡ್ನಿಯನ್ನೇ ಮಾರಲು ಹೊರಟ ಮಹಿಳೆ]

ಆಗ ನೋಟು ರದ್ದು ಮಾಡಿದ ಕೂಡಲೇ ಸೆಲ್ಯೂಟ್ ಮಿಸ್ಟರ್ ಮೋದಿ, ಎಲ್ಲಾ ರಾಜಕೀಯ ಪಕ್ಷಗಳು ಸಂಭ್ರಮಿಸಬೇಕಾದ ವಿಷಯ ಇದೆಂದು ಕಮಲ್ ಹಾಸನ್ ಈ ಹಿಂದೆ ಟ್ವೀಟ್ ಮಾಡಿದ್ದರು. ಆದರೆ ಎರಡು ತಿಂಗಳ ಹಿಂದೆ ರಾಜಕೀಯ ಪ್ರವೇಶಿಸುವುದಾಗಿ ಘೋಷಿಸಿದ ಕಮಲ್, ಖಚಿತವಾಗಿ ಬಿಜೆಪಿಯಲ್ಲಿ ಸೇರುವುದಿಲ್ಲ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಆಗ ನೋಟು ರದ್ದು ಕ್ರಮವನ್ನು ಸಮರ್ಥಿಸಿಕೊಂಡಿದ್ದು ತಾನು ಮಾಡಿದ ತಪ್ಪು ಎಂದು ಮಾತು ಬದಲಿಸಿದ್ದಾರೆ. ಇಷ್ಟೆಲ್ಲಾ ಹೇಳಿದ ಕಮಲ್, ನೋಟು ರದ್ದು ಕ್ರಮವನ್ನು ತಾನು ವಿರೋಧಿಸುತ್ತಿರುವುದೇಕೆ ಎಂಬುದನ್ನು ಮಾತ್ರ ವಿವರಿಸಲಿಲ್ಲ.

Get Latest updates on WhatsApp. Send ‘Add Me’ to 8550851559