ಕಮಲ್ ಮಾನಸಿಕ ಪರಿಸ್ಥಿತಿ ಸರಿಯಿಲ್ಲ, ಆಸ್ಪತ್ರೆಗೆ ದಾಖಲಿಸಿ – News Mirchi

ಕಮಲ್ ಮಾನಸಿಕ ಪರಿಸ್ಥಿತಿ ಸರಿಯಿಲ್ಲ, ಆಸ್ಪತ್ರೆಗೆ ದಾಖಲಿಸಿ

ದೇಶದಲ್ಲಿ ಹಿಂದೂ ಭಯೋತ್ಪಾದನೆ ಇದೆ ಎಂದು ವಿವಾದಾತ್ಮಕ ಲೇಖನ ಬರೆದ ನಟ ಕಮಲ್ ಹಾಸನ್ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಕಮಲ್ ಮಾನಸಿಕ ಪರಿಸ್ಥಿತಿ ಸರಿಯಿಲ್ಲ, ಹೀಗಾಗಿಯೇ ಆತ ಇಂತಹ ಹೇಳಿಕೆ ನಿಡುತ್ತಿದ್ದಾರೆ ಎಂದು ಕಿಡಿ ಕಾರಿದೆ. ಹಿಂದೂ ಭಯೋತ್ಪಾದನೆ ಎಂದು ಹೇಳಿಕೆ ನೀಡಿದ ಕಮಲ್ ಹಾಸನ್ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

ಕಮಲ್ ಮಾನಸಿಕ ಪರಿಸ್ಥಿತಿ ಸರಿಯಿಲ್ಲ, ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಬೇಕು. ರಾಜಕೀಯ ಇಷ್ಟು ಕೆಳಮಟ್ಟಕ್ಕೆ ಇಳಿಯುವುದು ಸರಿಯಲ್ಲ. ಯಾವುದೇ ಪುರಾವೆಗಳಿಲ್ಲದೆ ಆತ ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ ವಿನಯ್ ಕಟಿಯಾರ್ ಟೀಕಿಸಿದ್ದಾರೆ. ವಿವಾದದ ಹಿನ್ನೆಲೆಯಲ್ಲಿ ಕಮಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಸಾಧ್ಯತೆಯನ್ನು ತಮಿಳುನಾಡು ಬಿಜೆಪಿ ಪರಿಶೀಲಿಸುತ್ತಿದೆ.

[ಇದನ್ನೂ ಓದಿ: ರಾಜಕೀಯ ಪ್ರವೇಶ ಅನಿವಾರ್ಯ : ಪ್ರಮೋದ್ ಮುತಾಲಿಕ್]

ದೇಶದಲ್ಲಿ ಹಿಂದೂ ಭಯೋತ್ಪಾದನೆ ಹೆಚ್ಚಾಗಿದೆ ಎಂದು ಕಮಲ್ ವಿವಾದಿತ ಹೇಳಿಕೆ ನೀಡಿದ್ದು ತಿಳಿದದ್ದೇ. ಹಿಂದೂ ಭಯೋತ್ಪಾದನೆಯನ್ನು ನಿಯಂತ್ರಿಸಲು ಬಿಜೆಪಿ ಸರ್ಕಾರ ವಿಫಲವಾಗಿದೆ, ಬಿಜೆಪಿ ಆಡಳಿತ ರಾಜ್ಯಗಳಾದ ಉತ್ತರಪ್ರದೇಶ, ಗುಜರಾತ್, ರಾಜಸ್ಥಾನಗಳಲ್ಲಿ ಈ ಪರಿಸ್ಥಿತಿ ಮತ್ತಷ್ಟು ಘೋರವಾಗಿದೆ ಎಂದು ಕಮಲ್ ಹೇಳಿದ್ದರು. ವಿಕಟನ್ ಪತ್ರಿಕೆಯಲ್ಲಿ ಆತ ಬರೆದ ಲೇಖನ ಈಗ ವಿವಾದದ ಕೇಂದ್ರಬಿಂದುವಾಗಿದೆ.

ಈ ಹಿಂದೆ ಹಿಂದೂ ಸಂಘಟನೆಗಳು ಹಿಂಸೆಗೆ ಇಳಿಯುತ್ತಿರಲಿಲ್ಲ, ಕೇವಲ ಮಾತುಗಳಿಂದಲೇ ವಿರೋಧಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದವು. ಆದರೆ ಪರಿಸ್ಥಿತಿಗಳು ಈಗ ಹದಗೆಟ್ಟಿದ್ದು. ದಾಳಿಗಳಿಗೆ ಇಳಿಯುವ ಮಟ್ಟಕ್ಕೆ ಇಳಿದಿವೆ ಎಂದು ಕಮಲ್ ಆರೋಪಿಸಿದ್ದರು. ಅವರನ್ನು ಹಿಂದಿನಿಂದ ಕೆಲವರು ಪ್ರೋತ್ಸಾಹಿಸುತ್ತಿದ್ದಾರೆ. ಅಸಲಿಗೆ ಹಿಂದೂ ಭಯೋತ್ಪಾದನೆ ಇಲ್ಲವೆಂಬ ಕೆಲವರ ವಾದದಲ್ಲಿ ಸತ್ಯವಿಲ್ಲ. ಹಿಂದೂ ಭಯೋತ್ಪಾದನೆ ಇದೆ. ಈಗ ಹೆಚ್ಚಾಗಿದೆ ಎಂದು ಕಮಲ್ ತಮ್ಮ ಲೇಖನದಲ್ಲಿ ಬರೆದಿದ್ದರು.

Get Latest updates on WhatsApp. Send ‘Add Me’ to 8550851559

Loading...