ಗಾಯಕ ಎಲ್.ಎನ್.ಶಾಸ್ತ್ರಿ ವಿಧಿವಶ |News Mirchi

ಗಾಯಕ ಎಲ್.ಎನ್.ಶಾಸ್ತ್ರಿ ವಿಧಿವಶ

ಕನ್ನಡ ಚಿತ್ರರಂಗದ ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ಎಲ್.ಎನ್.ಶಾಸ್ತ್ರಿ (ಲಕ್ಷ್ಮಿ ನರಸಿಂಹ ಶಾಸ್ತ್ರಿ) ಅವರು ಬುಧವಾರ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. 46 ವರ್ಷ ಶಾಸ್ತ್ರಿಯವರು ಕೆಲ ತಿಂಗಳುಗಳಿಂದ ಕ್ಯಾನ್ಸರ್ ನಿಂದ ಬಳುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದರು.

“ಎ”, ಜನುಮದ ಜೋಡಿ, ಜೋಡಿ ಹಕ್ಕಿ, ಸಿಪಾಯಿ ಸೇರಿದಂತೆ ಸುಮಾರು 15 ಚಿತ್ರಗಳಿಗೆ ಎಲ್.ಎನ್.ಶಾಸ್ತ್ರಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಜನುಮದ ಜೋಡಿ ಚಿತ್ರದಲ್ಲಿನ ಕೋಲುಮಂಡೆ ಜಂಗಮದೇವ ಹಾಡಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದರು.

Loading...
loading...
error: Content is protected !!