ಕನ್ನಡ ಟುಡೇ ನ್ಯೂಸ್ ವೆಬ್ ಸೈಟ್ ಅನಾವರಣ

ಬೆಂಗಳೂರು: ಕನ್ನಡ ಟುಡೇ ನ್ಯೂಸ್ ವೆಬ್ ಸೈಟ್ ಗುರುವಾರ ಬೆಳಿಗ್ಗೆ ಬೆಂಗಳೂರಿನ ಗಾಂಧಿಭವನದಲ್ಲಿ ಅನಾವರಣಗೊಂಡಿತು. ಸುಕ್ಷೇತ್ರ ಅಂಕಲಿಮಠದ ಪಕೀರೇಶ್ವರ ಸ್ವಾಮೀಜಿಯವರು ಕಾಯ೯ಕ್ರಮ ನೆರವೇರಿಸಿದರು.

ಈ ಸಂದಭ೯ದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ “ಕನ್ನಡ ಟುಡೇ” ವೆಬ್ ಸೈಟ್ ನ ಸಂಸ್ಥಾಪಕ ಪ್ರಧಾನ ಸಂಪಾದಕ ವೀರೇಶ್ ಎ.ನಾಡಗೌಡರ್ ಮಾತನಾಡಿ,  ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ‘ಕನ್ನಡ ಟುಡೇ” ವರದಿಗಾರರನ್ನು ಹೊಂದಿದ್ದು ಗ್ರಾಮೀಣ ಸಮಸ್ಯೆಗಳನ್ನು ಡಿಜಿಟಲ್ ಮಾಧ್ಯಮದ ಮೂಲಕ ಜನರಿಗೆ ತಲುಪಿಸುವುದು ನಮ್ಮ ಮುಖ್ಯ ಉದ್ದೇಶ ಎಂದರು.

ಮುಖ್ಯ ಅತಿಥಿಗಳಾಗಿ ವೀರಶೈವ ಲಿಂಗಾಯತ ಯುವ ವೇದಿಕೆ ರಾಜ್ಯಾಧ್ಯಕ್ಷರಾದ ಪ್ರಶಾಂತ್ ಕಲ್ಲೂರು,  ಬಹುಜನ ಸಮಾಜ ಪಕ್ಷದ ರಾಜ್ಯ ಸಂಯೋಜಕರಾದ ಮಾರಸಂದ್ರ ಮುನಿಯಪ್ಪ, ಬಿಜೆಪಿ ರಾಜ್ಯ ಯುವಘಟಕ ಉಪಾಧ್ಯಕ್ಷ ರಹೀಮ್ ಉಚ್ಚಿಲ್,  ಬ್ಲೂಬಡ್ಸ್೯ ಟೆಕ್ನಾಲಜಿಸ್ ಕಂಪನಿಯ ರವಿಕುಮಾರ್ ಜೋಯಿಸ್ ಮೈಸೂರು, ಸತೀಶ್ ಪೊನ್ನಾಚಿ ನಿರೂಪಣೆ ಮಾಡಿದರು , ಸಹ  ಸಂಪಾದಕ ಬಸನಗೌಡ ಮೇಟಿಯವರು ವಂದನಾರ್ಪಣೆ ನೆರವೇರಿಸಿದರು.

Related News

loading...
Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache