ಈತ ಪಾಕ್ ದ್ವಜ ಹಾರಿಸಲು ಕಾರಣವೇನು ಗೊತ್ತೇ? |News Mirchi

ಈತ ಪಾಕ್ ದ್ವಜ ಹಾರಿಸಲು ಕಾರಣವೇನು ಗೊತ್ತೇ?

ಕಾನ್ಪುರ: ಉತ್ತರಪ್ರದೇಶದ ಕಾನ್ಪುರದಲ್ಲಿ ಚಂದ್ರಪಾಲ್ ಎಂಬ ವ್ಯಕ್ತಿ ತನ್ನ ಮನೆಯ ಮೇಲೆ ಪಾಕ್ ದ್ವಜ ಹಾರಿಸಿದ್ದಾನೆ. ನಗರದ ನೆಹರೂ ನಗರದಲ್ಲಿ ವಾಸವಿರುವ ಚಂದ್ರಪಾಲ್ ಸಿಂಗ್ (36) ಕಾನ್ಪುರ್ ನಗರ ನಿಗಮ ವಿಧಿಸುತ್ತಿರುವ ತೆರಿಗೆ(ಮನೆ ತೆರಿಗೆ, ನೀರಿನ ತೆರಿಗೆ) ವಿರೋಧಿಸಿ ಈ ಕೆಲಸ ಮಾಡಿದ್ದಾನೆ.

ಅಧಿಕಾರಿಗಳು ಬೋಗಸ್ ತೆರಿಗೆ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಳೆದ 8 ವರ್ಷಗಳಿಂದ ಸಂಬಂಧಿಸಿದ ಕಛೇರಿಗಳ ಸುತ್ತ ಅಲೆಯುತ್ತಿದ್ದಾನೆ. ಆದರೂ ಅಧಿಕಾರಿಗಳು ಸ್ಪಂದಿಸದ ಕಾರಣ ಗುರುವಾರ ಮನೆ ಮೇಲೆ ಪಾಕಿಸ್ತಾನ ರಾಷ್ಟ್ರದ್ವಜ ಹಾರಿಸಿದ್ದಾನೆ. ಇದು ಗಮನಿಸಿದ ಅಕ್ಕಪಕ್ಕದ ಜನ ಪೊಲೀಸರಿಗೆ ಮಾಹಿತಿ ನೀಡಿದರು ಹೀಗಾಗಿ ಪೊಲೀಸರು ಚಂದ್ರಪಾಲ್ ವಿರುದ್ಧ 124-ಎ, 153 ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಂಡು ವಶಕ್ಕೆ ಪಡೆದಿದ್ದಾರೆ.

Loading...
loading...
error: Content is protected !!