ಹಣ ಪಡೆಯಲು ಕ್ಯೂನಲ್ಲಿ ನಿಂತರೆ, ಹೆರಿಗೆ ಆಯ್ತು!

ಕಾನ್ಪುರ: ನೋಟು ರದ್ದು ನಂತರ ಹಣ ವಿತ್ ಡ್ರಾ ಮಾಡಲು ಉದ್ದದ ಸಾಲುಗಳಲ್ಲಿ ನಿಲ್ಲಬೇಕಾಗಿ ಬರುತ್ತಿದೆ. ಹೀಗೆ ಹಣಕ್ಕಾಗಿ ಕ್ಯೂನಲ್ಲಿ ನಿಂತ ಮಹಿಳೆಯೊಬ್ಬರು ಹೆಣ್ಣುಗುವಿಗೆ ಜನ್ಮ ನೀಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಕಾನ್ಪುರ್ ದೇಹತ್ ಜಿಲ್ಲೆಯಲ್ಲಿ ಪಂಜಾಬ್ ಬ್ಯಾಂಕ್ ನಲ್ಲಿ ಹಣ ವಿತ್ ಡ್ರಾ ಮಾಡಲು ಸರ್ವೇಶ(30) ಎಂಬ ಮಹಿಳೆ ತನ್ನ ಅತ್ತೆಯೊಂದಿಗೆ ಬ್ಯಾಂಕಿಗೆ ತೆರಳಿದ್ದಳು. ಗುರುವಾರ ಸಾಲಿನಲ್ಲಿ ನಿಂತಿದ್ದರೂ ಅಂದು ಹಣ ದೊರೆತಿರಲಿಲ್ಲ. ಹೀಗಾಗಿ ಶುಕ್ರವಾರ ಬೆಳಗ್ಗೆಯಿಂದ ಸಾಲಿನಲ್ಲಿ ಕಾಯುತ್ತಿದ್ದಳು.

ಸುಮಾರು ನಾಲ್ಕು ಗಂಟೆ ವೇಳೆಯಲ್ಲಿ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಆಂಬ್ಯುಲೆನ್ಸ್ ಬರಲು ತಡವಾದ ಕಾರಣ ಅಲ್ಲಿದ್ದ ಮಹಿಳೆಯರೇ ಹೆರಿಗೆ ಸುಗಮವಾಗಿ ಆಗಲು ಸಹಕರಿಸಿದರು. ಅವರ ಸಹಾಯದಿಂದ ಬ್ಯಾಂಕಿನಲ್ಲೇ ಸರ್ವೇಶ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ನಂತರ ಪೊಲೀಸರು ತಾಯಿ ಮಗುವನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರು.

ಈ ಸೆಪ್ಟೆಂಬರ್ ನಲ್ಲಿ ಸರ್ವೇಶ ತನ್ನ ಪತಿಯನ್ನು ಅಪಘಾತವೊಂದರಲ್ಲಿ ಕಳೆದುಕೊಂಡಿದ್ದಳು. ಹೀಗಾಗಿ ಉತ್ತರಪ್ರದೇಶ ಸರ್ಕಾರ ರೂ.2.75 ಲಕ್ಷ ಹಣ ಮತ್ತು ಮನೆ ಘೋಷಿಸಿತ್ತು. ಮೊದಲ ಕಂತಿನ ಹಣವನ್ನು ತೆಗೆದುಕೊಳ್ಳಲು ಸರ್ವೇಶ ತನ್ನ ಅತ್ತೆಯೊಂದಿಗೆ ಬ್ಯಾಂಕ್ ಗೆ ತೆರಳಿದ್ದಳು.

Related News

Loading...

Leave a Reply

Your email address will not be published.

error: Content is protected !!