ಇಡಿ ಮುಬಾರಕ್ ಎಂದು ಕೇಜ್ರಿವಾಲ್ ಕಾಲೆಳೆದ ಕಪಿಲ್ ಮಿಶ್ರಾ |News Mirchi

ಇಡಿ ಮುಬಾರಕ್ ಎಂದು ಕೇಜ್ರಿವಾಲ್ ಕಾಲೆಳೆದ ಕಪಿಲ್ ಮಿಶ್ರಾ

ಆಮ್ ಆದ್ಮಿ ಪಕ್ಷದ ಉಚ್ಛಾಟಿತ ನಾಯಕ ಕಪಿಲ್ ಮಿಶ್ರಾರವರು ಸೋಮವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಿಗೆ ‘ಈದ್ ಮುಬಾರಕ್’ ಹೇಳುವ ನೆಪದಲ್ಲಿ ಕಾಲೆಳೆದಿದ್ದಾರೆ. ಇದಕ್ಕೂ ಮೊದಲು ಅರವಿಂದ್ ಕೇಜ್ರಿವಾಲ್ ರಂಜಾನ್ ಆಚರಿಸುತ್ತಿರುವ ಮುಸ್ಲಿಮರಿಗೆ “ಈದ್ ಮುಬಾರಕ್” ಹೇಳಿದ್ದರು. ಇದಾದ ನಂತರ ಕಪಿಲ್ ಮಿಶ್ರಾ, ಅರವಿಂದ್ ಕೇಜ್ರಿವಾಲ್ ರವರಿಗೆ ಈದ್ ಮುಬಾರಕ್ ಹೇಳುತ್ತಿರುವಂತೆ ಹೇಳಿ ಪರೋಕ್ಷವಾಗಿ ಕಾಲೆಳೆದರು.

“ED mubarak (ಎನ್ಫೋರ್ಸ್’ಮೆಂಟ್ ಡೈರೆಕ್ಟರೇಟ್ ನಿಂದ ನಿಮಗೆ ಶುಭಾಶಯಗಳು)” ಎಂದು ಅರವಿಂದ್ ಕೇಜ್ರಿವಾಲ್ ಗೆ ಕಪಿಲ್ ಮಿಶ್ರಾ ಟ್ವೀಟ್ ಮಾಡಿದ್ದಾರೆ.

ಕೇಜ್ರಿವಾಲ್ ಟ್ವೀಟ್ 1,705 ಬಾರಿ ರೀಟ್ವೀಟ್ ಆಗಿದ್ದರೆ. ಕೇಜ್ರಿವಾಲ್ ಕಾಲೆಳೆದು ಮಿಶ್ರಾ ಮಾಡಿದ ಟ್ವೀಟ್ 3,500 ಬಾರಿ ರೀಟ್ವೀಟ್ ಆಗಿದೆ.

ಒಂದು ಕಾಲದಲ್ಲಿ ಅರವಿಂದ್ ಕೇಜ್ರಿವಾಲ್ ರ ಅತ್ಯಾಪ್ತರಾಗಿದ್ದ ಕಪಿಲ್ ಮಿಶ್ರಾ, ಪಕ್ಷದಿಂದ ಉಚ್ಛಾಟನೆಯಾದ ದಿನದಿಂದಲೂ ಅರವಿಂದ್ ಕೇಜ್ರಿವಾಲ್ ಮತ್ತು ಸಿಬಿಐ ತನಿಖೆ ಎದುರಿಸುತ್ತಿರುವ ಸತ್ಯೇಂದ್ರ ಜೈನ್ ಅವರನ್ನು ಗುರಿಯಾಗಿಸಿ ಭ್ರಷ್ಟಾಚಾರ ಆರೋಪಗಳನ್ನು ಮಾಡುತ್ತಲೇ ಬರುತ್ತಿದ್ದಾರೆ.

Loading...
loading...
error: Content is protected !!